ಬೆಳ್ತಂಗಡಿ; ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ನಾಡಿನ ಸರ್ವಧರ್ಮೀಯರ ಸೌಹಾರ್ದತೆಯ ಸಮನ್ವಯ ಕ್ಷೇತ್ರ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇಲ್ಲಿನ 2021 ನೇ ಸಾಲಿನ ಉರೂಸ್ ಮಹಾ ಸಂಭ್ರಮಕ್ಕೆ ದಿನಾಂಕ ಪ್ರಕಟವಾಗಿದೆ. ದರ್ಗಾ ಶರೀಫ್ ನಲ್ಲಿ ನಡೆದ ಕಾಜೂರು -ಕಿಲ್ಲೂರು ಜಂಟಿ ಉರೂಸ್ ಸಮಿತಿಯ ಸಭೆಯಲ್ಲಿ ಕಾಜೂರ್ ಸಮಿತಿಯ ಗೌರವಾಧ್ಯಕ್ಷ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ದಿನಾಂಕ ಪ್ರಕಟಿಸಿದ್ದಾರೆ.
2021ರ ಕಾಜೂರು ಮಖಾಂ ಶರೀಫ್ ಉರೂಸ್ ಮುಂದಿನ ಫೆಬ್ರವರಿ 19ರಿಂದ 28ರ ವರೆಗೆ ನಡೆಯಲಿದೆ. ಕಾಜೂರು ಕ್ಷೇತ್ರದ ಖಾಝಿ, ತಾಜುಲ್ ಉಲಮಾರ ಸುಪುತ್ರ ಸೈಯದ್ ಕೂರತ್ ತಂಙಳ್ ಮಾರ್ಗದರ್ಶನದಲ್ಲಿ, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.