ಮುಂಡಾಜೆ: ತಾಲೂಕು ಸಮುದಾಯ ಆಸ್ಪತ್ರೆಯ ನಿರ್ದೇಶನದಲ್ಲಿ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾ.ಪಂ ಮುಂಡಾಜೆ ಸಹಿತ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊರೊನಾ ಜಾಗೃತಿ ಜಾಥಾ ಕಾರ್ಯಕ್ರಮ ನ.30 ರಂದು ಮುಂಡಾಜೆ ಗ್ರಾಮದ ಸೋಮಂತಡ್ಕ ದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾವ್ಯಾ ವೈಪನಾ, ಎರಡನೇ ಹಂತದ ಕೋವಿಡ್ ಬಗ್ಗೆ ಜಾಗೃತಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮಾನವ ಸ್ಪಂದನ ತಂಡದ ನುಖ್ಯಸ್ಥ ಪಿ.ಸಿ ಸೆಬಾಸ್ಟಿಯನ್, ಗ್ರಾ.ಪಂ. ಕಾರ್ಯದರ್ಶಿ ಸಂಜೀವ ನಾಯ್ಕ, ಮುಂಡಾಜೆ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ರೋಟರಿ ಸಮುದಾಯ ದಳದ ಅಧ್ಯಕ್ಷೆ ಅಶ್ವಿನಿ ಎ.ಹೆಬ್ಬಾರ್, ಕಾರ್ಯದರ್ಶಿ ವಿಘ್ನೇಶ್ ಪ್ರಭು, ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮುಖ್ಯಸ್ಥ ಅಡೂರು ವೆಂಕಟ್ರಾಯ, ಜಮಲುಲ್ಲೈಲಿ ಮಸೀದಿಯ ಆಡಳಿತ ಸಮಿತಿ ಸದಸ್ಯ ಹಮೀದ್ ನೆಕ್ಕರೆ, ರಿಕ್ಷಾ ಚಾಲಕ ಮಾಲಕರ ಸಂಘದ ಸಂಚಾಲಕ ಸುರೇಶ್ ಹೆಗ್ಡೆ, ಅನಂತ ಫಡ್ಕೆ ಮೆಮೋರಿಯಲ್ ಟ್ರಸ್ಟ್ ನ ಸಂಚಾಲಕ ಪ್ರಹ್ಲಾದ ಫಡ್ಕೆ, ಮುಂಡಾಜೆ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸೇವಂತಿ, ಗ್ರಾಮ ದೈವಸ್ಥಾನ ಶ್ರೀ ಮೂರ್ತಿಲ್ಲಾಯು ಕ್ಷೇತ್ರದ ಸಮಿತಿ ಅಧ್ಯಕ್ಷ ಅಗರಿ ರಾಮಣ್ಣ ಶೆಟ್ಟಿ, ಕಲಾಕುಂಚ ಆರ್ಟ್ಸ್ ಮುಖ್ಯಸ್ಥ ಜಯರಾಂ.ಕೆ, ಚರ್ಚ್ ಸಮಿತಿಯ ವಿನ್ಸೆಂಟ್ ವೈಪನಾ, ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಅಜಯ್ ನಿರೂಪಿಸಿದರು. ಕೋವಿಡ್ ಸೋಲ್ಜರ್ ತಂಡದ ಮುಖ್ಯಸ್ಥ ಅಶ್ರಫ್ ಆಲಿಕುಂಞಿ ವಂದಿಸಿದರು. ವಿ.ಜೆ ಕಾಂಪ್ಲೆಕ್ಸ್ ಮಾಲಕ ಅಬ್ರಾಹಂ ತಂಪು ಪಾನೀಯ ವ್ಯವಸ್ಥೆ ಒದಗಿಸಿದರು.
–