ವೇಣೂರು: ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಂತರ್ಗತವಾಗಿರುವ ಶಕ್ತಿ ಹೊರಹೊಮ್ಮಲು ನೈಪುಣ್ಯ ಶಿಬಿರ ಸಹಕಾರಿ: ಶಾಸಕ ಹರೀಶ್ ಪೂಂಜ

ವೇಣೂರು: ನಮ್ಮಲ್ಲಿರುವ ಅಂತರ್ಗತವಾಗಿರುವ ಶಕ್ತಿಯನ್ನು ಹೊರಹೊಮ್ಮಲು ನೈಪುಣ್ಯ ಶಿಬಿರ ಸಹಕಾರಿ. ಈ ಶಿಬಿರದ ಮೂಲಕ 1200 ಮಂದಿ ಶಿಬಿರಾರ್ಥಿಗಳು ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಅವರ ಏಳಿಗೆಯಿಂದ ಗ್ರಾಮದ ಏಳಿಗೆಯೂ ಆಗಲಿದೆ. ತರಬೇತಿ ಪೂರ್ಣ ಪ್ರಯೋಜನ ಪಡೆದು ಯಶಸ್ವಿ ವ್ಯಕ್ತಿಗಳಾಗಿ ಸಮಾಜದಲ್ಲಿ ಮೂಡಿಬನ್ನಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದ.ಕ. ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‌ನ ಸಹಯೋಗದಲ್ಲಿ ವೇಣೂರು, ಅಳದಂಗಡಿ, ನಾರಾವಿ ಹಾಗೂ ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘಗಳ ಇದರ ನೇತೃತ್ವದಲ್ಲಿ ನ.30 ರಂದು ವೇಣೂರು ವಿದ್ಯೋದಯ ಶಾಲೆಯ ವಠಾರದಲ್ಲಿ ಜರಗಿದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದ.ಕ. ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯೋದಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಶಿವರಾಮ ಹೆಗ್ಡೆ, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಭಟ್, ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ ಸಿದ್ಧಮೂರ್ತಿ, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಅಳದಂಗಡಿ ಪ್ರಾ.ಕೃ.ಸ. ಸಂಘದ ಅಧ್ಯಕ್ಷ ಶಿವ ಭಟ್, ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ನವೀನ್ ಸಾಮಾನಿ, ನಾರಾವಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸೇವಾ ಪ್ರಮುಖ್ ಸುಬ್ರಹ್ಮಣ್ಯ ಭಾರ್ನಕೆರೆ, ವೇಣೂರು ತಾಲೂಕು ಸಂಘಚಾಲಕ ರಘುನಂದನ್, ತರಬೇತಿ ಸಂಯೋಜಕರುಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಮಂಗಳೂರು ವಿಭಾಗದ ಗ್ರಾಮವಿಕಾಸ ಸಂಯೋಜಕ ವೆಂಕಟರಮಣ ಹೊಳ್ಳ ಪ್ರಾಸ್ತಾವಿಸಿದರು. ಸಹಕಾರ ಭಾರತಿ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆರ್ಮುಂಡ ನಿರ್ವಹಿಸಿ, ಶಿಬಿರದ ಪ್ರಧಾನ ಸಂಚಾಲಕ ಪ್ರತೀಶ ಪೂಜಾರಿ ಹೊಸಂಗಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.