ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಆದೇಶ
ಬೆಳ್ತಂಗಡಿ: ಅವಧಿ ಮುಗಿದ ಗ್ರಾಮ ಪಂಚಾಯತಗಳಿಗೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಡಿ.22 ಮತ್ತು27ರಂದು ಎರಡು ಹಂತಗಳಲ್ಲಿ ಗ್ರಾ.ಪಂ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದೆ ಹಾಗೂ ಗ್ರಾ.ಪಂ ಚುನಾವಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ಆದೇಶ ನೀಡಿದೆ.
ಡಿ.22ಮತ್ತು27ರಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನದ ನಂತರ ಮರು ಮತದಾನದ ಅವಶ್ಯಕತೆ ಇದ್ದಲ್ಲಿ, ಮೊದಲ ಹಂತದ ಚುನಾವಣೆಗೆ ಡಿಸೆಂಬರ್ 24, 2020ರಂದು ನಡೆಯಲಿದೆ. ಎರಡನೇ ಹಂತದ ಗ್ರಾಮ ಪಂಚಾಯ್ತಿಗಳಿಗೆ ಮರು ಮತದಾನ ಡಿ.29, 2020ರಂದು ನಡೆಯಲಿದೆ. ಡಿ.30 ರಂದು ಮತ ಎಣಿಕೆ ನಡೆದು ಚುನಾವಣಾ ಪಲಿತಾಂಶ ಬರಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಇಂದು(ನ.30) ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ
ದ.ಕ ಜಿಲ್ಲೆಯ ಮಂಗಳೂರು, ಮೂಡುಬಿದಿರೆ, ಬಂಟ್ವಾಳ ತಾಲೂಕುಗಳಲ್ಲಿ ಮೊದಲನೇ ಹಂತದಲ್ಲಿ(ಡಿ.22) ಚುನಾವಣೆ ಹಾಗೂ ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಎರಡನೇ ಹಂತ(ಡಿ.27)ದಲ್ಲಿ ಚುನಾವಣೆ ನಡೆಯಲಿದೆ
ಮೊದಲನೇ ಹಂತದ ಚುನಾವಣೆ: ಡಿ.7 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡು, ಡಿ.11 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿ.22ರಂದು ಮತದಾನ ನಡೆಯಲಿದೆ.
ಎರಡನೇ ಹಂತದ ಚುನಾವಣೆ: ಡಿ.11 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡು, ಡಿ.16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿ.27 ರಂದು ಮತದಾನ ನಡೆದು, ಡಿ. 30 ರಂದು ಮತ ಎಣಿಕೆ ನಡೆಯಲಿದೆ.