ಕಲ್ಲೇರಿಯಲ್ಲಿ ಭೀಕರ ರಸ್ತೆ ಅಪಘಾತ: ಪಿಕಪ್ ಡಿಕ್ಕಿ; ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಮಲು ಪದಾರ್ಥ ಸೇವಿಸಿ ನಡೆದ ದುರಂತ: ಪಿಕಪ್ ಚಾಲಕನ ಮೇಲೆ ಕೇಸು ದಾಖಲು


ಕಲ್ಲೇರಿ: ಇಲ್ಲಿಯ ಹುಣ್ಸೆಕಟ್ಟೆ ಸಮೀಪ ದ್ವಿಚಕ್ರ ವಾಹನಕ್ಕೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ನ.29 ರಂದು ತಡರಾತ್ರಿ ನಡೆದಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪಿಕಪ್ ಚಾಲಕ ಕೊಯ್ಯೂರು ಗ್ರಾಮದ ಕಜೆ ಮನೆ ನಿವಾಸಿ ಹರೀಶ್(29.ವ) ಎಂಬಾತನನ್ನು ಸಾರ್ವಜನಿಕರ ಸಹಕಾರದಲ್ಲಿ ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

 
ಘಟನೆಯ ವಿವರ: ನ.29ರಂದು ಸುಮಾರು 9 ಗಂಟೆಯ ಸಮಯದಲ್ಲಿ ಕೂಲಿ ಕಾರ್ಮಿಕರಾದ ಉರುವಾಲು ಗ್ರಾಮದ ಶುಂಠಿಪಲ್ಕೆ ದಿ.ಕಿಟ್ಟಣ್ಣ ರೈಯವರ ಪುತ್ರ ಕೃಷ್ಣ ಪ್ರಸಾದ್ ರೈ (36ವ.)ಮತ್ತು ಜೊತೆಗಿದ್ದ ಕಣಿಯೂರು ಗ್ರಾಮದ ನಾರಳಿಕೆ ದಿ.ಚಂದಪ್ಪ ಗೌಡರ ಪುತ್ರ ಜಯರಾಮ ಗೌಡ (29ವ.)ರವರು ತಮ್ಮ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿಯಿಂದ ಕಲ್ಲೇರಿ ಕಡೆಗೆ ಬರುತ್ತಿದ್ದ ಸಂದರ್ಭ, ಎದುರುಕಡೆಯಿಂದ ಬಂದ ಕೆ.ಎ-21-ಬಿ-2766 ನೋಂದಣಿ ಸಂಖ್ಯೆಯ ಪಿಕಪ್ ವಾಹನ ಇವರ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರೀರ್ವರೂ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ

ವಾಹನ ಚಲಾಯಿಸುತ್ತಿದ್ದ ವೇಳೆ ಪಿಕಪ್ ಚಾಲಕ ಆರೋಪಿ ಹರೀಶ್ ಅಮಲು ಪದಾರ್ಥ ಸೇವಿಸಿದ್ದರೆನ್ನಲಾಗ್ಗಿದ್ದು, ರಾಂಗ್ ಸೈಡಿನಿಂದ ಬಂದು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಅಪಘಾತ ನಡೆದ ನಂತರ ಪಿಕಪ್ ಚಾಲಕ ವಾಹನ ಸಮೇತ ಪರಾರಿಯಾಗಲು ಯತ್ನಿಸಿದ್ದು. ಕಲ್ಲೇರಿ ಜನತಾ ಕಾಲೋನಿ ಸಾರ್ವಜನಿಕರು ವಾಹನ ಸಮೇತ ಆರೋಪಿಯನ್ನುತಡೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.


ಪೊಲಿಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈತನ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕಲಂ: 279, & ಕಲಂ: 134(ಎ) & (ಬಿ), 185 ಐಎಂವಿ ಕಾಯ್ದೆ ಹಾಗೂ ಕಲಂ.304 ಐಪಿಸಿ ಪ್ರಕರಣ ದಾಖಲಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.