ಬೆಳ್ತಂಗಡಿ:ಪಡುಮಲೆ ಬ್ರಹ್ಮ ಕಲಶೋತ್ಸವ ಸಮಾಲೋಚನಾ ಸಭೆ ಬೆಳ್ತಂಗಡಿ: ಪಡುಮಲೆ ಕೋಟಿ ಚೆನ್ನಯ ಮೂಲ ಸ್ಥಾನ ದಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿದ್ದ ಬ್ರಹ್ಮ ಕಲಶ ನಡೆಸುವ ಕುರಿತು ಬೆಳ್ತಂಗಡಿ ತಾಲೂಕಿನ ಸಮಾಲೋಚನಾ ಸಭೆ ನ.29 ರಂದು ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ನಡೆಯಿತು
ಪಡುಮಲೆ ಟ್ರಸ್ಟ್ ನ ಗೌರವ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಹರಿಕ್ರಷ್ಣ ಬಂಟ್ವಾಳ, ವಿನೋದ್ ಆಳ್ವ, ಉಪಾಧ್ಯಕ್ಷ ಯೋಗೀಶ್ ನಡಕ್ಕರ ಕಾರ್ ಶ್ರೀಧರ ಪಟ್ಲ, ವಿಜಯ ಕುಮಾರ್ ಸೊರಕೆ, ಪಾಂಡುರಂಗ ಬಂಡಾರ್ ಕರ್ , ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಂಘದ ಉಪಾಧ್ಯಕ್ಷ ಮನೋಹರ ಕುಮಾರ್, ಕಾರ್ಯದರ್ಶಿ ನಾರಾಯಣ ಸುವರ್ಣ, ಭಗಿರಥ ಜಿ. ಶ್ಯೆಲೇಶ್ ಕುಮಾರ್, ಯುವ ವಾಹಿನಿಯ ಅಧ್ಯಕ್ಷ ಎಂ.ಕೆ. ಪ್ರಸಾದ್ ವಿವಿಧ ಗಣ್ಯರು, ತಾಲೂಕಿನ ವಿವಿಧ ಪ್ರಮುಖ ರು ಭಾಗವಹಿಸಿದ್ದರು