ಬಳಂಜ: ಕುಟುಂಬ ಮಿಲನ ಕಾರ್ಯಕ್ರಮ, ವಾಹನ ಜಾಥ ಮುಖಾಂತರ ಅತಿಥಿಗಳ ಸ್ವಾಗತ
ಬಳಂಜ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ, ಬಿಜೆಪಿ ಮಹಾಶಕ್ತಿ ಕೇಂದ್ರ ಅಳದಂಗಡಿ,ಬಳಂಜ ಗ್ರಾಮ ಪಂಚಾಯತ್ ಮಟ್ಟದ ಕುಟುಂಬ ಮಿಲನ ಕಾರ್ಯಕ್ರಮವು ಶ್ರೀ ಕೊಡಮಣಿತ್ತಾಯ ದೈವಸ್ಥಾನ ಆವರಣ ಕರ್ಮದೋಟ್ಟು ಬಳಂಜ ದಲ್ಲಿ ನ. 29 ನಡೆಯಿತು.
ಕಾರ್ಯಕ್ರಮವನ್ನು ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮದ ಹಿರಿಯ ಬಿಜೆಪಿ ಕಾರ್ಯಕರ್ತರಾದ ನಾಣ್ಯ ಪ್ಪ ಪೂಜಾರಿ ನಾಲ್ಕೂರು, ಪುರಂದರ ಶೆಟ್ಟಿ ಬಳಂಜ,
ಶಾಂತಪ್ಪ ಮೂಲ್ಯ ತೆಂಕಕಾರಂದೂರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ , ಮಂಡಲ ಉಪಾಧ್ಯಕ್ಷ ಸೀತರಾಮ್ ಬೆಳಾಲ್,ಅಳದಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಹೊಳ್ಳ,
ನಾಲ್ಕೂರು ಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಯೈಕುರಿ,ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಶಿವ ಭಟ್,ಅಂಡಿಂಜೆ ತಾ.ಪಂ ಸದಸ್ಯ ಸುದೀರ್ ಆರ್ ಸುವರ್ಣ, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಅರುಣ್ ಕ್ರಾಸ್ತಾ,ಮಂಡಲ ಕಾರ್ಯದರ್ಶಿ ಆನಂದ ಸಾಲಿಯಾನ್,ಪಡಂಗಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಜಿಲ್ಲಾ ಎಸ್ ಸಿ ಮೋರ್ಚಾದ ಉಪಾಧ್ಯಕ್ಷ ಸದಾಶಿವ,ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪ್ರಭಾಕರ ಆಚಾರ್ಯ, ಬಳಂಜ ಗ್ರಾ.ಪಂ ಚುನಾವಣ ಪ್ರಭಾರಿ ಮೋಹನ್ ದಾಸ್ ಬಳಂಜ ಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಶೆಟ್ಟಿ, ತೆಂಕಕಾರಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಹೇಮಂತ್ ,ನಾಲ್ಕೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಖಂಡಿಗ, ಬಳಂಜ ಬೂತ್ ಸಮಿತಿ ಅಧ್ಯಕ್ಷ ಗಣೇಶ್ ಸಂಭ್ರಮ, ತೆಂಕಕಾರಂದೂರು ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ,ಶರತ್,ಉಪಸ್ಥಿತರಿದ್ದರು. ಬಳಂಜ ಪಂಚಾಯತ್ ಮಟ್ಟದ ಅಧ್ಯಕ್ಷ ರಾಕೇಶ್ ಹೆಗ್ಡೆ ಸ್ವಾಗತಿಸಿ, ಪ್ರಥಮ್ ಗೋಖಲೆ ವಂದೇ ಮಾತರಂ ಗೀತೆಯನ್ನು ಹಾಡಿ, ನಾರಾಯಣ ಕಳಿಕ ಪ್ರಾಸ್ತಾವಿಸಿ, ಜಗದೀಶ್ ಬಳಂಜ ನಿರೂಪಿಸಿದರು.
ಬಾಕ್ಸ್..
ಕಾರ್ಯಕ್ರಮದ ಮೊದಲು ಕಾಪಿನಡ್ಕದಿಂದ ಬಳಂಜದವರೆಗೆ ವಾಹನ ಜಾಥ ಮುಖಾಂತರ ಅತಿಥಿಗಳನ್ನು ಸ್ವಾಗತಿಸಲಾಯಿತು.
ಬಾಕ್ಸ್…
14 ಮಂದಿ ಬಿಜೆಪಿ ಸೆರ್ಪಡೆ
ಕಾರ್ಯಕ್ರಮದಲ್ಲಿ ಮಥಾಯಸ್ ಕ್ರಾಸ್ತ,ಡೇನಿಲ್ ಕ್ರಾಸ್ತ,ಪೆಲಿಕ್ಸ್ ಕ್ರಾಸ್ತಾ,ಅರ್ವಿನ್ ಕ್ರಾಸ್ತಾ,ಅರುಣ್ ಪಿಂಟೋ,ಅರುಣ್ ಕ್ರಾಸ್ತಾ,ಜೇಮ್ಸ್ ಕ್ರಾಸ್ತಾ,ನೆಲ್ಸನ್ ಕ್ರಾಸ್ತಾ,ಡೆರಿಲ್,ಟ್ರಿನಿತ್ ಕ್ರಾಸ್ತಾ,ಅನಿಲ್ ಕ್ರಾಸ್ತಾ,ವೇಲೆರಿಯನ್ ಕ್ರಾಸ್ತಾ,ಅವಿನ್ ಕ್ರಾಸ್ತಾ ರವರು ಭಾರತೀಯ ಜನತಾ ಪಾರ್ಟಿ ತತ್ವ ಸಿದ್ದಾಂತ ಒಪ್ಪಿಕೊಂಡು, ಶಾಸಕ ಹರೀಶ್ ಪೂಂಜರವರ ಕಾರ್ಯ ವೈಖರಿಯನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಗೊಂಡರು.