ಕಳೆಂಜ: ಕಳೆದ ವರ್ಷದ ಮಳೆ ಮತ್ತು ನೆರೆ ಸಂದರ್ಭ ಸೂರು ಕಳೆದುಕೊಂಡ ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಲಿಯಮ್ಮ ಅವರ ಕುಟುಂಬಕ್ಕೆ ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ನೂತನ ಮನೆ ನಿರ್ಮಿಸಿ ನ.28 ರಂದು ಹಸ್ತಾಂತರಿಸಲಾಯಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಬಿಷಪ್ ಲಾರೆನ್ಸ್ ಮುಕ್ಕುಯಿರವರು ನೂತನ ಗೃಹದ ಉದ್ಘಾಟಿಸಿದರು. ವಂ. ಸ್ವಾಮಿ ಜೋಸೆಫ್ ಮುಕ್ಕಾಟ್, ಸ್ಥಳೀಯ ಧರ್ಮ ಭಗಿನಿಯರು, ಕಳೆಂಜ ಗ್ರಾ.ಪಂ.ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಯರ್ತಡ್ಕ ಸೈಂಟ್ ಸೆಬಾಸ್ಟಿಯನ್ ಚರ್ಚಿನ ಧರ್ಮಗುರುಗಳಾದ ವಂ. ಸ್ವಾಮಿ ಫ್ರಾನ್ಸಿಸ್ ಓಡಂಪಳ್ಳಿ ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ. ಸ್ವಾಮಿ ಬಿನೋಯಿ ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿ, ಜೋನ್ಸನ್ ಧನ್ಯವಾದವಿತ್ತರು.
ಬೆಂಗಳೂರು ಮಹಾ ಧರ್ಮಪ್ರಾಂತ್ಯ, ಕಾರಿತಾಸ್ ಇಂಡಿಯಾ ನವದೆಹಲಿ, ಸಿ.ಎಮ್.ಐ ಸಂಸ್ಥೆ ಕೇರಳ ಹಾಗೂ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆ ಡಿ.ಕೆ.ಆರ್.ಡಿ.ಎಸ್ ಇವರ ಆರ್ಥಿಕ ಸಹಕಾರದಿಂದ ಈ ನೂತನ ಗೃಹ ನಿರ್ಮಾಣಗೊಂಡ ಇದು ಆರನೇ ಮನೆಯಾಗಿದೆ.