ಅಳದಂಗಡಿ ಅರಸರ ಪಟ್ಟಾಭಿಷೇಕದ ರಜತ ಸಂಭ್ರಮಾಚರಣೆ: ಧರ್ಮಸ್ಥಳ ಹೆಗ್ಗಡೆಯವರಿಗೆ ಆಮಂತ್ರಣ

ಅಳದಂಗಡಿ: ಇಲ್ಲಿಯ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ರವರು ಪಟ್ಟಾಭಿಷಿಕ್ತರಾಗಿ 25 ವರ್ಷಗಳ ಅಂಗವಾಗಿ ಪಟ್ಟಾಭಿಷೇಕದ ರಜತ ಸಂಭ್ರಮಾಚರಣೆ ಡಿ.1 ರಂದು ಅಳದಂಗಡಿಯಲ್ಲಿ ಜರುಗಲಿದೆ. ಇದರ ಪ್ರಯುಕ್ತ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರಿಗೆ ವಿಶೇಷ ಆಮಂತ್ರಣ ನೀಡಲಾಯಿತು.
ಈ ಸಂದರ್ಭದಲ್ಲಿ ಪಟ್ಟಾಭಿಷೇಕದ ರಜತ ಸಂಭ್ರಮಾಚರಣೆಯ ಕಾರ್ಯಾಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಶಶಿಕಿರಣ್ ಜೈನ್, ಸಂಚಾಲಕರಾದ ಶಿವಪ್ರಸಾದ್ ಅಜಿಲ ಅಳದಂಗಡಿ ಅರಮನೆ, ಉಪಾಧ್ಯಕ್ಷ ಸುಭಾಷ್‌ಚಂದ್ರ ರೈ ಪಡ್ಯೋಡಿಗುತ್ತು, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.