ಉಜಿರೆ: ಉಜಿರೆ ಗ್ರಾಮ ಪಂಚಾಯತ್ ನ 2019-20ನೇ ಸಾಲಿನ ವಾರ್ಷಿಕ ಜಮಾಬಂದಿ ಕಾರ್ಯಕ್ರಮ ನ .27 ರಂದು ಗ್ರಾಮ ಪಂಚಾಯತ್ ಕಛೇರಿ ಸಭಾ ಭವನದಲ್ಲಿ ನಡೆಯಿತು.
ಜಮಾಬಂದಿ ಅಧಿಕಾರಿಯಾಗಿ ದ.ಕ.ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ ಕೆ.ಆನಂದ್ ಕುಮಾರ್ ಸಭೆಯನ್ನು ನಡೆಸಿಕೊಟ್ಟರು. ಆಡಳಿತಾಧಿಕಾರಿ ಡಾ.ಎಂ.ಎಸ್. ಯತೀಶ್ ಕುಮಾರ್, ಕಾರ್ಯದರ್ಶಿ ಯು.ಬಿ.ಜಯಂತ್, ಗ್ರಾಮಸ್ಥರು, ಹಾಜರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ ಎಚ್. ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಲೆಕ್ಕ ಸಹಾಯಕ ಮಂಜು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು