ಬೆಳ್ತಂಗಡಿ ತಾಲೂಕುಕಳೆಂಜ ವಿದ್ಯುತ್ ಅವಘಡ 3ವರ ಮೇಲೆ ಕೇಸ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಬೆಳ್ತಂಗಡಿ:ದಿನಾಂಕ 27.11.2020 ರಂದು ಮದ್ಯಾಹ್ನ ಸುಮಾರು 1.00 ಗಂಟೆಗೆ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಶಾಲೆತ್ತಡ್ಕ ಚಾಕೋಟೆತ್ತಡಿ ಎಂಬಲ್ಲಿ ಕಳಂಜ-ಮುದ್ದಿಗೆ ವಿದ್ಯುತ್ ಲೈನ್ ಎಳೆಯುವ ಕಾಮಗಾರಿ ನಡೆಯುತ್ತಿದ್ದಾಗ ಪ್ರತಾಪ್, ನಾಗಪ್ಪ ಮತ್ತು ಕಿಶೋರ್ ರವರುಗಳು ಬೇರೆ ಬೇರೆ ವಿದ್ಯುತ್ ಕಂಬಗಳನ್ನು ಏರಿ ಲೈನ್ ಎಳೆಯುವ ಕಾಮಗಾರಿ ನಡೆಸುವ ಸಮಯ 1ನೇ ಆರೋಪಿತ ಕೆ.ಇ.ಬಿ. ಇಲಾಖೆಯ ಲೈನ್ ಮ್ಯಾನ್ ಉದಯ ರವರು ಕಾಮಗಾರಿ ನಡೆಸುವ ವಿದ್ಯುತ್ ಲೈನ್ ನ ವಿದ್ಯುತ್ ಪ್ರವಾಹವನ್ನು ಕಡಿತಗೊಳಿಸದೆ ಬೇರೆ ಲೈನ್ ನ ವಿದ್ಯುತ್ ಪ್ರವಾಹ ಕಡಿತಗೊಳಿಸಿ ನಿರ್ಲಕ್ಷತನ ತೋರಿದ ಪರಿಣಾಮ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದ ಪ್ರತಾಪ್, ನಾಗಪ್ಪ ಮತ್ತು ಕಿಶೋರ್ ರವರುಗಳಿಗೆ ವಿದ್ಯುತ್ ಪ್ರವಾಹ ಉಂಟಾಗಿ ಪ್ರತಾಪ್ ರವರು ವಿದ್ಯುತ್ ಕಂಬದಲ್ಲಿ ಸುಟ್ಟ ಗಾಯಗಳಾಗಿ ಮೃತಪಟ್ಟಿದ್ದು, ನಾಗಪ್ಪ ಮತ್ತು ಕಿಶೋರ್ ರವರು ಸುಟ್ಟ ಗಾಯಗಳಾಗಿ ಕಂಬದಿಂದ ಬಿದ್ದು ಗಾಯಗೊಂಡು ಉಜಿರೆ ಬೆನಕ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೆ.ಇ.ಬಿ. ಇಲಾಖೆಯ ಲೈನ್ ಮ್ಯಾನ್ ಉದಯ, ಉಪಗುತ್ತಿಗೆದಾರ ಕುಮಾರ್ ಪೂಜಾರಿ ಮತ್ತು ಮುಖ್ಯ ಗುತ್ತಿಗೆದಾರರಾದ ಮುಗರೋಡಿ ಕನ್ಸ್ ಸ್ಟ್ರಕ್ಷನ್ ರವರುಗಳ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 338,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.