ಪೆರ್ಲ ಪ್ರದೇಶಕ್ಕೆ ಹೊಸ ಟವರ್ ಬೇಡಿಕೆ
ಶಿಬಾಜೆ: ಶಿಬಾಜೆ ಗ್ರಾಮದ ಪೆರ್ಲ ಪ್ರದೇಶಕ್ಕೆ ಮಂಜೂರಾದ ಏರ್ಟೆಲ್ ಮೊಬೈಲ್ ಟವರನ್ನು ರಾಜಕೀಯ ಪಿತೂರಿಯಿಂದ ಭಂಡಿಹೊಳೆಗೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಹಾಗೂ ಪೆರ್ಲ ಪ್ರದೇಶದಲ್ಲಿ ಇನ್ನೊಂದು ಏರ್ಟೆಲ್ ಟವರ್ ನಿರ್ಮಿಸುವಂತೆ ಒತ್ತಾಯಿಸಿ ನಮ್ಮ ಪೆರ್ಲ ಜನಹಿತ ರಕ್ಷಣಾ ವೇದಿಕೆ ವತಿಯಿಂದ ನ.26 ರಂದು ಭಂಡಿಹೊಳೆಯಲ್ಲಿ ಪ್ರತಿಭಟನೆ ನಡೆಯಿತು.
ಶಿಬಾಜೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಾಧವ ಗೌಡ, ಶಿಬಾಜೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸಿ.ಎಂ. ಜೋರ್ಜ್, ನ್ಯಾಯವಾದಿ ಶಿವ ಕುಮಾರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಶಿಬಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಈಶ್ವರ ಶೆಟ್ಟಿಗಾರ್, ನ್ಯಾಯವಾದಿ ಶಿವ ಕುಮಾರ್, ಹತ್ಯಡ್ಕ ಸಹಕಾರಿ ಸಂಘದ ಮಾಜಿ ನಿರ್ದೇಶಕ ಚಿದಾನಂದ ಪೂಜಾರಿ ಪಿ.ಎಸ್, ಪೆರ್ಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಟಿ, ಬಾಲಚಂದ್ರ ಶೆಟ್ಟಿಗಾರ್ ನೂಜಿ , ಪೆರ್ಲ ಎಸ್ಡಿಎಂಸಿ ಮಾಜಿ ಅಧ್ಯಕ್ಷ ರುಕ್ಮಯ್ಯ ಮುಗೇರ, ಮಾಜಿ ಉಪಾಧ್ಯಕ್ಷ ಮೋಹನ್ ಶೆಟ್ಟಿಗಾರ್, ಚಾರ್ಟಡ್ ಎಕೌಂಟೆಂಟ್ ರಂಜಿತ್ ಶೆಟ್ಟಿಗಾರ್, ಧನಲಕ್ಷ್ಮೀ ಚಾಮುಂಡೇಶ್ವರಿ ಭಜನಾ ಮಂದಿರದ ಮಾಜಿ ಅಧ್ಯಕ್ಷ ದಿನೇಶ್ ನೀರಾಣ, ಪೆರ್ಲ ರಾಜರಾಜೇಶ್ವರಿ ಭಜನಾ ಮಂಡಳಿ ಮಾಜಿ ಉಪಾಧ್ಯಕ್ಷ ಸುಧಾಕರ ಶೆಟ್ಟಿಗಾರ್, ಜನಾರ್ದನ ಪೂಜಾರಿ ನೆಕ್ಕರ್ತಿಮಾರ್, ರಘು ಬಂಗೇರಡ್ಕ, ಪಿ.ಜೆ ತೋಮಸ್, ಪಿ.ವಿ ಮಥಾಯಿ ಮತ್ತಿತರರು ಭಾಗವಹಿಸಿದ್ದರು.