ಕಾರ್ಮಿಕರ ಮುಷ್ಕರ-ರಸ್ತೆ ತಡೆ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಾರ್ಮಿಕ ವರ್ಗ ವಿರೋಧಿ ಕೇಂದ್ರ ಸರ್ಕಾರ ತೊಲಗಲಿ- ಬಿ ಎಂ ಭಟ್

 ಬೆಳ್ತಂಗಡಿ: ಕಾರ್ಮಿಕರ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡುತ್ತಾ ರೈತ ವಿರೋಧಿಯಾಗಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಕಾರ್ಪರೇಟ್ ಕಂಪನಿಗಳ ಹಿತ ಕಾಪಾಡುವ ಕೇಂದ್ರದ ನರೇಂದ್ರ ಮೋದಿ ಸರಕಾರ ಕಾರ್ಮಿಕ ವಿರೋಧಿ ಸರಕಾರವಾಗಿದೆ ಎಂದು ಹಿರಿಯ ಕಾರ್ಮಿಕ ಮುಖಂಡ  ನ್ಯಾಯವಾದಿ ಬಿ.ಎಂ ಭಟ್ ಹೇಳಿದರು.

ಅವರು ನ.26ರಂದು ಬೆಳ್ತಂಗಡಿ ಬೀಡಿ ಕೆಲಸಗಾರರ ಸಂಘ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ, ಕ.ರಾ.ಋಣ ಮುಕ್ತ ಹೋರಾಟ ಸಮಿತಿ, ಅಕ್ಷರದಾಸೋಹ ಕೆಲಸಗಾರರ ಸಂಘ, ಸಂಗಾತಿ ಗುಂಪು ಯೋಜನೆ ನೇತೃತ್ವದಲ್ಲಿ ಅಖಿಲ ಭಾರತ ಕಾರ್ಮಿಕರ ಮುಷ್ಕರದ ಭಾಗವಾಗಿ ಬೆಳ್ತಂಗಡಿಯಲ್ಲಿ ನಡೆದ ರಸ್ತೆ ತಡೆ ಹೋರಾಟವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಬೀಡಿ ಕಾರ್ಮಿಕರ ಕನಿಷ್ಟ ವೇತನ ಮತ್ತು ಡಿ.ಎ 3 ವರ್ಷದಿಂದ ಬಾಕಿ ತಲಾ ರೂ.22000, ಬೀಡಿ ಕಾರ್ಮಿಕರಿಗೆ ಕನೋನು ಬದ್ದ ಗ್ರ್ಯಾಚುವಿಟಿ ನೀಡದೆ ಮಾಲಕರ ಮೋಸಕ್ಕೆ ಸರಕಾರದ ಬೆಂಬಲ, ಬೀಡಿ ಕಾರ್ಮಿಕರಿಗೆ, ಅಕ್ಷರ ದಾಸೋಹ ನೌಕರರಿಗೆ ಯಾವುದೇ ಲಾಕ್‌ಡೌನ್ ಪರಿಹಾರ ನೀಡದ ಸರಕಾರ, ಇದೀಗ ಕಾರ್ಮಿಕ ವಿರೋಧಿಯಾಗಿ, ರೈತ ವಿರೋಧಿಯಾಗಿ ಕಾನೂನು ತಿದ್ದುಪಡಿ ಮಾಡುತ್ತಾ ದೇಶದ ಸಂಪತ್ತನ್ನು ಖಾಸಗಿಯವರಿಗೆ ಮಾರುತ್ತಿರುವುದನ್ನು ಕಾರ್ಮಿಕ ವರ್ಗ ಸಹಿಸುವುದಿಲ್ಲ ಎಂದರು. ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದ ಬಿಜೆಪಿ ಸರಕಾರ ಗುತ್ತಿಗೆ ಕೃಷಿ ಪದ್ದತಿಗೆ ಅವಕಾಶ ನೀಡುವ ಮಸೂದೆ ಜಾರಿಗೆ ತಂದಿದೆ. ಇವನ್ನೆಲ್ಲಾ ಹಿಂಪಡೆಯಬೇಕು. ಇಲ್ಲವಾದರೆ ಉಗ್ರವಾದ ಸಮರಶೀಲ ಹೋರಾಟವನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.


ಕಾರ್ಮಿಕ ನಾಯಕ ಎಲ್ ಮಂಜುನಾಥ್ ಸ್ವಾಗತಿಸಿ, ಕಾರ್ಮಿಕ ನಾಯಕಿ ಈಶ್ವರಿ ವಂದಿಸಿದರು. ಪ್ರತಿಭಟನೆಯಲ್ಲಿ ಜಯರಾಮ ಮಯ್ಯ, ಸಂಜೀವ ನಾಯ್ಕ, ನೆಬಿಸಾ, ಜಯಶ್ರೀ, ಸುಜಾತ, ಭವ್ಯ, ಅದಿತಿ, ವಿನುಶ, ಮೋಹಿನಿ ಪಿಲ್ಯ ಭಾರತಿ ಮುಗುಳಿ, ಮಹಿಳಾ ಸಂಘದ ನಾಯಕಿ ಕುಮಾರಿ ಮೊದಲಾದವರಿದ್ದರು.

ರಸ್ತೆ ತಡೆ ಮಾಡಿದ ಹೋರಾಟಗಾರರನ್ನು ಪೋಲೀಸರು ತೆರವುಗೊಳಿಸಿದ ಬಳಿಕ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.