ಮುಂಡಾಜೆ: 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಸೂರು ಕಳೆದುಕೊಂಡ ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಕರಿಯರವರಿಗೆ ಡಿ.ಕೆ.ಆರ್.ಎಸ್ ಸಂಸ್ಥೆಯ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ನ.೨೫ರಂದು ನೆರವೇರಿಸಲಾಯಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿಯವರು ನೂತನ ಗೃಹದ ಉದ್ಘಾಟನೆಯನ್ನು ನೆರವೇರಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಸಾ.ಬಿನೋಯಿ ಎ.ಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಮನೆಯನ್ನು ನಿರ್ಮಿಸಿಕೊಟ್ಟ ಶಾಂತಪ್ಪರವರನ್ನು ಸನ್ಮಾನಿಸಲಾಯಿತು.
ಬೆಂಗಳೂರು ಮಹಾಧರ್ಮಪ್ರಾಂತ್ಯ, ಕಾರಿತಾಸ್ ಇಂಡಿಯಾ ನವದೆಹಲಿ, ಸಿ.ಎಂ.ಐ ಸಂಸ್ಥೆ ಕೇರಳ, ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆಯಾದ ಡಿ.ಕೆ.ಆರ್.ಡಿ.ಎಸ್ ಹಾಗೂ ಮುಂಡಾಜೆ ಗ್ರಾಮ ಪಂಚಾಯತ್ ಇವರ ಆರ್ಥಿಕ ಸಹಕಾರದಿಂದ ಈ ನೂತನ ಗೃಹ ನಿರ್ಮಾಣಗೊಂಡಿದ್ದು, ರೂ.೧೦ .೫೦ಲಕ್ಷದಷ್ಟು ವೆಚ್ಚವಾಗಿದ್ದು, ಡಿ.ಕೆ ಆರ್.ಡಿ.ಎಸ್ ಸಂಸ್ಥೆಯ ನೇತೃತ್ವದಲ್ಲಿ ನಿರ್ಮಿಸಿದ ಐದನೇ ಮನೆಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಂ,ಸ್ವಾ. ಜೋಸೆಫ್ ಮುಕ್ಕಾಟ್ ಉಪಸ್ಥಿತರಿದ್ದರು. ಮುಂಡಾಜೆ ಸಂತ ಮೇರಿಸ್ ಚರ್ಚಿನ ಧರ್ಮ ಗುರುಗಳಾದ ವಂ. ಸ್ವಾ. ಸ್ಟೆಬಾಸ್ಟಿಯನ್ ಪುನ್ನತ್ತಾನತ್ ಎಲ್ಲರನ್ನು ಸ್ವಾಗತಿಸಿ, ಡಿ.ಕೆ.ಆರ್.ಡಿ.ಎಸ್ ನ ಕಾರ್ಯಕರ್ತ ಮಾರ್ಕ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಮನೆಯವರಾದ ಶ್ರೀಮತಿ ಸೌಮ್ಯ ನೂತನ ಮನೆ ನಿರ್ಮಾಣದ ಕಾರ್ಯದಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದವಿತ್ತರು.