ಬೆಳ್ತಂಗಡಿ: ಮಂಗಳೂರಿನ ಅತ್ತಾವರದಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪುತ್ತೂರು ಸರ್ವೆ ಗ್ರಾಮದ ಸರ್ವೆದೋಳ ನಿವಾಸಿ ನಾರಾಯಣ ಪೂಜಾರಿ(61.ವ)ರವರು ಹೃದಯಾಘಾತದಿಂದ ನ.24ರಂದು ಪುತ್ತೂರು ಮನೆಯಲ್ಲಿ ನಿಧನರಾದರು.
ಇವರು ಕಳೆದ 4 ವರ್ಷಗಳ ಹಿಂದೆ ಬೆಳ್ತಂಗಡಿ ಮೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರಾಗಿ ಕಾರ್ಯನಿರ್ವಹಿಸಿದ್ದು, ನಂತರ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ಎರಡು ವರ್ಷಗಳ ನಂತರ ಅವರು ಅಧೀಕ್ಷಕ ಇಂಜಿನಿಯರ್ ಆಗಿ ಮಂಗಳೂರಿನ ಅತ್ತಾವರಕ್ಕೆ ವರ್ಗಾವಣೆಗೊಂಡಿದ್ದು ಅಲ್ಲಿ ಅವರು ಏ.30ರಂದು ಸೇವಾ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ ಆಶಾಕಿರಣ, ಪುತ್ರಿ ನಿಹಾರಿಕಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.