ರೂ.1.50 ಲಕ್ಷ ನಗದು ದೋಚಿ ಪರಾರಿ
ನಾವೂರು: ಇಲ್ಲಿಯ ಕೈಕಂಬ ಬಸ್ ಬಸ್ಸು ತಂಗುದಾಣದಲ್ಲಿ ವ್ಯಾಪಾರ ನಡೆಸುತ್ತಿದ್ದ ಕೃಷ್ಣಪ್ಪ ಗೌಡ ದಡ್ಡು ಇವರು ರಾತ್ರಿ ಅಂಗಡಿಗೆ ಬಾಗಿಲು ಹಾಕಿ ಹೊರಡುವ ಸಂದರ್ಭದಲ್ಲಿ ಹಲ್ಲೆಗೈದು, ಸುಮಾರು1.50 ಲಕ್ಷ ರೂ ನಗದನ್ನು ದರೋಡೆಗೈದು ಪರಾರಿಯಾದ ಘಟನೆ ನ.24 ರಂದು ರಾತ್ರಿ ನಡೆದಿದೆ.
ಕೃಷ್ಣಪ್ಪ ರವರು ನ.24 ರಂದು ರಾತ್ರಿ 10ಗಂಟೆಗೆ ಅಂಗಡಿಗೆ ಬೀಗ ಹಾಕಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಡುವ ಸಂದರ್ಭ ಅಂಗಡಿಯ ಹಿಂಬದಿ ಇರುವ ಗೂಡಂಗಡಿ ಬದಿಯಿಂದ ಬಂದ 2 ಮಂದಿ ದರೋಡೆಕೋರರು ಕೃಷ್ಣಪ್ಪ ರವರ ಕಣ್ಣಿಗೆ ಖಾರಾ ಪುಡಿ ಎರಚಿದ್ದು, ಅವರ ಕೈ, ಕಾಲು, ತಲೆಗೆ ರಾಡ್ನಿಂದ ಹಲ್ಲೆಗೈದು ಅವರ ಕೈಯ್ಯಲ್ಲಿದ್ದ ಬ್ಯಾಂಕಿನಿಂದ ಡ್ರಾ ಮಾಡಿದ ಸಾಲದ ಹಣ ಮತ್ತು ಆ ದಿನದ ವ್ಯಾಪಾರದ ಮೊತ್ತ ಸೇರಿ ರೂ.1.50 ಲಕ್ಷ ನಗದು, ರೆಕಾರ್ಡ್ ಅಂಗಡಿ ಕೀ ಇದ್ದ ಬ್ಯಾಗನ್ನು ದೊಚಿ ಪರಾರಿಯಾಗಿದ್ದಾರೆ.
ಹಲ್ಲೆಗೈಯ್ಯುವ ವೇಳೆ ಕೃಷ್ಣಪ್ಪ ರವರು ಬೊಬ್ಬೆ ಹೊಡೆದಿದ್ದು, ಕೂಡಲೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಅವರನ್ನು ಉಜಿರೆ ಬೆನಕ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.