ಬಜಿರೆ: ಯುವಕ ನೇಣು ಬಿಗಿದು ಆತ್ಮಹತ್ಯೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಅನಾರೋಗ್ಯದಿಂದ ಬಳಲುತ್ತಿದ್ದ ಬಜಿರೆ ಗ್ರಾಮದ ಬೆಳ್ಳಿಬೆಟ್ಟು ನಿವಾಸಿ ರಾಜೇಶ್ (27) ಮನೆಯ ಕೋಣೆಯಲ್ಲಿ ನ. 24ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಕಳೆದೆರಡು ತಿಂಗಳಿನಿಂದ ತಲೆಯ ಎಡ ಭಾಗದಲ್ಲಿ ಗುಳ್ಳೆಯೊಂದು ಎದ್ದಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಇತ್ತೀಚಿನಿಂದ ಎರಡೂ ಕಾಲು ಬಲಹೀನವಾಗಿ ನಡೆಯಲು ಕಷ್ಟವಾಗಿತ್ತು ಎನ್ನಲಾಗಿದೆ. ಮನೆಮಂದಿ ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದವರು ಮಂಗಳವಾರ ಮುಂಜಾನೆ ಎದ್ದು ಗಮನಿಸಿದಾಗ ರಾಜೇಶ್ ಅವರ ಮೃತದೇಹ ಮನೆಯ ಕೋಣೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನಾರೋಗ್ಯದಿಂದ ಬೇಸತ್ತು ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.