ನಾಳ : ಅನಾರೋಗ್ಯದಿಂದ ಬಳಲುತ್ತಿರುವ ಕ್ರೀಡಾ ಪಟುಗಳ ಕ್ಷೇಮಾಭಿವೃದ್ಧಿಗಾಗಿ ಆಯೋಜಿಸಲಾದ ಕುತೂಹಲ ಕಪ್ ಸೀಜನ್- 9 ಮಕ್ಕಳ ಹಾಗೂ ಪುರುಷರ ಗ್ರೀಪ್ ಮತ್ತು ಕೆಸರು ಗದ್ದೆ ಹಗ್ಗ ಜಗ್ಗಾಟ ಕ್ರೀಡಾ ಕೂಟವು ನ.22 ರಂದು ನಾಳ ಮೈಲೋಡಿ ಗೆದ್ದಯಲ್ಲಿ ನಡೆಯಿತು.
ಕ್ರೀಡಾ ಕೂಟ ಸಂಯೋಜಕ ವಿಜಯ ಗೌಡ ಆತ್ತಾಜೆ ನೇತೃತ್ವ ವಹಿಸಿ ಮಾತನಾಡಿ, ಅನಾರೋಗ್ಯದಿಂದ ಬಳಲುತ್ತಿರುವ ಕ್ರೀಡಾ ಪಟುಗಳ ಕ್ಷೇಮಾಭಿವೃದ್ಧಿಗಾಗಿ ಈ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದ್ದು, ಕ್ರೀಡಾ ಕೂಟಕ್ಕೆ ಕ್ರೀಡಾ ಅಭಿಮಾನಿಗಳು ಕೈಜೋಡಿಸಿ ಸಹಕರಿಸಿ ಯಶಸ್ವಿ ಗೊಳಿಸುವಂತೆ ವಿನಂತಿಸಿದರು.
ತಾ.ಪಂ.ಸದಸ್ಯ ಪ್ರವೀಣ್ ಕುಮಾರ್ ಕೊಯ್ಯೂರು, ಕಳಿಯ ಪಂಚಾಯತು ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ, ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧಾರಕ ಮಜಲು, ನ್ಯಾಯವಾದಿ ವಸಂತ ಮರಕ್ಕಡ, ಗಾಯಕ ಉದಯ ಕುಮಾರ್ ಲಾಯಿಲ, ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಭುವನೇಶ್ವರ ಜಿ, ಸುದ್ದಿ ಪತ್ರಿಕೆ ವರದಿಗಾರ ಕೆ.ಎನ್.ಗೌಡ ಹಾಗೂ ಜ್ಯೋತಿ ಎಂಟರ್ ಪ್ರೈಸಸ್ ಮಾಲಕ ಹರೀಶ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ರಾಜ್ಯ ಮಟ್ಟದ ತೀರ್ಪುಗಾರ ಮಹೇಶ್ ಲಾಯಿಲ, ಜಗದೀಶ್ ಬಂದಾರು, ಉದ್ಯಮಿ ಗಣೇಶ್ ಗೌಡ, ಸಂತೋಷ ಬೆಳಾಲು ಕ್ರೀಡಾ ಕೂಟವನ್ನು ಯಶಸ್ವಿಯಾಗಿ ನಿರ್ವಹಿಸಿದರು ಮತ್ತು ಸ್ಥಳೀಯರು ಸಹಕರಿಸಿದರು.
ಪ್ರಾಥಮಿಕ ಶಾಲಾ ಮಕ್ಕಳ ಗ್ರೀಪ್ ಮಾದರಿಯ ಹಗ್ಗ ಜಗ್ಗಾಟದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ಪಾಲಡ್ಕ ಪ್ರಥಮ ಮತ್ತು ನಾಳ ಬಾಯ್ಸ್ ವಿದ್ಯಾರ್ಥಿಗಳು ದ್ವೀತಿಯ ಸ್ಥಾನ ಪಡೆದುಕೊಂಡರು.
ಪುರುಷರ ಪಂದ್ಯದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ಪಾಲಡ್ಕ ಪ್ರಥಮ, ಶ್ರೀ ದುರ್ಗಾ ಪ್ರೇಂಡ್ಸ್ ಗೇರುಕಟ್ಟೆ ದ್ವೀತಿಯ, ಸಾಸ್ತಾ ನೆಲ್ಯಾಡಿ ತೃತೀಯ, ಶ್ರೀ ಸಾಯಿ ಪ್ರೇಂಡ್ಸ್ ಮೊಗ್ರು ಬಂದಾರು ಚತುರ್ಥ ಸ್ಥಾನ ಪಡೆದುಕೊಂಡರು.
ಕೇಸರು ಗದ್ದೆ ಹಗ್ಗ ಜಗ್ಗಾಟ್ಟದಲ್ಲಿ ಪ್ರೇಂಡ್ಸ್ ಪನೋಲಿಬೈಲ್ ಪ್ರಥಮ, ದ್ವೀತಿಯ ಫ್ರೆಂಡ್ಸ್ ಮೊಗರ್ನಾಡು, ತೃತೀಯ ಅನ್ನಪೂರ್ಣೇಶ್ವರಿ ಉಪ್ಪಿನಂಗಡಿ, ಶ್ರೀ ಸ್ವಾಮಿ ಕೊರಗಜ್ಜ ಪಾಲಡ್ಕಚತುರ್ಥ ಸ್ಥಾನ ಪಡೆದುಕೊಂಡರು