ಚುನಾವಣಾ ಪ್ರಕ್ರಿಯೆ ನಡೆಸಿದವರ ವಿರುದ್ದ ಹಾಗೂ ಚುನಾವಣಾ ಅಧಿಕಾರಿಯನ್ನು ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬಾರ್ಯ: ಬಾರ್ಯ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ನಿರ್ದೇಶಕರ, ಅಧ್ಯಕ್ಷ ಉಪಾಧ್ಯಕ್ಷರ ಚುನಾವಣಾ ಪಕ್ರಿಯೆಯಲ್ಲಿ ಸರಕಾರದ ಆದೇಶ ಹಾಗೂ ಕಾನೂನನ್ನು ಗಾಳಿಗೆ ತೂರಿ ಅದ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಿದ ಚುನಾವಣಾ ಅಧಿಕಾರಿ ಹಾಗೂ ಚುನಾವಣಾ ಪ್ರಕ್ರಿಯೆ ನಡೆಸಿದವರ ವಿರುದ್ದ ಹಾಗೂ ಇಂತಹ ಅಧಿಕಾರಿಯವರನ್ನು ಕರ್ತವ್ಯದಿಂದ ವಜಾಗೊಳಿಸಿ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನ.24 ರಂದು ಬಾರ್ಯ ಸೇವಾ ಸಹಕಾರಿ ಬ್ಯಾಂಕಿನ ವಠಾರದಲ್ಲಿ ಜರುಗಿತು.
ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಜನ್ ಜಿ ಗೌಡ, ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಕೆ ಶಾಹುಲ್ ಹಮೀದ್, ಬೆಳ್ತಂಗಡಿ ಯುವ ಕಾಂಗ್ರೇಸ್ ಅದ್ಯಕ್ಷರಾದ ಅಭಿನಂದನ್ ಹರೀಶ್ ಕುಮಾರ್,ಜಯವಿಕ್ರಮ ಕಲ್ಲಾಪು, ಉಷಾ ಶರತ್ , ಯುಕೆ ಇಸುಬು, ಅಬ್ದುಲ್ ರಝಾಕ್, ನವೀನ್ ರೈ, ದಯಾಂದ ಬೆಳಾಲು ಪ್ರವೀಣ್ ಬೆಳಾಲು ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ದ.ಕ. ಜಿಲ್ಲಾ ಸಹಕಾರಿ ಸಂಘದ ಉಪನಿಬಂಧಕ ಡಿ.ಆರ್. ಪ್ರವೀಣ್ ನಾಯ್ಕರವರು ಸ್ಥಳಕ್ಕೆ ಆಗಮಿಸಿದ್ದು , ತನಿಖೆ ನಡೆಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.