ಡಿ.1:ಅಳದಂಗಡಿ ಅರಮನೆ ತಿಮ್ಮಣ ಅರಸರಾದ ಡಾ ಪದ್ಮಪ್ರಸಾದ ಅಜಿಲರ ಪಟ್ಟಾಭಿಷೇಕ ರಜತ ಮಹೋತ್ಸವ

ಬೆಳ್ತಂಗಡಿ: ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಪಟ್ಟಾಭಿಷಿಕ್ತರಾಗಿ ೨೫ ವರ್ಷಗಳು ಸಂದ ಪ್ರಯುಕ್ತ ಅವರ ಪಟ್ಟಾಭಿಷೇಕ ರಜತಮಹೋತ್ಸವ ಕಾರ್ಯಕ್ರಮವನ್ನು ಡಿ.1ರಂದು ಅಳದಂಗಡಿ ಅರಮನೆಯಲ್ಲಿ ಸರಳ ಸಾಂಪ್ರಾದಾಯಿಕ ರೀತಿಯಲ್ಲಿ ಆಚರಿಸಲಾಗುವುದು ಎಂದು ರಜತ ಮಹೋತ್ಸವ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು.


ಅವರು ನ.23ರಂದು ಬೆಳ್ತಂಗಡಿ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತುಳುನಾಡಿನಲ್ಲಿ ೧೧೫೪ರಿಂದ ೧೫೫೦ರ ವರೆಗೆ ಸ್ವತಂತ್ರವಾಗಿ ೧೨ ಮಾಗಣೆಯ ರಾಜ್ಯಭಾರ ನಡೆಸಿದ ಕೀರ್ತಿ ಅಜಿಲ ವಂಶಜರಿಗೆ ಸಲ್ಲುತ್ತದೆ. ಈ ವಂಶದಲ್ಲಿ ೨೧ನೇ ಅರಸರಾಗಿ ೧೯೯೫ರಲ್ಲಿ ಡಾ. ಪದ್ಮಪ್ರಸಾದ ಅಜಿರು ಪಟ್ಟಾಭಿಷಿಕ್ತರಾದರು. ತಮ್ಮ ಅವಧಿಯಲ್ಲಿ ಸೀಮೆಯ ಪ್ರಮುಖ ದೇವಾಲಯ, ಜಿನ ಮಂದಿರಗಳು, ಭೂತಾಲಯಗಳು ಜೀರ್ಣೋದ್ಧಾರಗೊಂಡು ಬ್ರಹ್ಮ ಕಲಶ, ಪಂಚಕಲ್ಯಾಣ, ಪನರ್‌ಪ್ರತಿಷ್ಠೆ ಕಾರ್ಯಕ್ರಮ ನಡೆದಿದ್ದು, ಎಲ್ಲಾ ಕಾರ್ಯಕ್ರಮಗಳಿಗೆ ಅರಸರು ನೇತೃತ್ವ ವಹಿಸಿದ್ದಾರೆ ಎಂದರು.
ಸುಮಾರು ೪೦೦ ವರ್ಷಕ್ಕೂ ಪುರಾತನವಾದ ಬರಾಯ ಕಾಷ್ಠ ಶಿಲ್ಪದ ಅರಮನೆಯನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದ್ದು, ತುಳುನಾಡಿನ ಸಂಪ್ರದಾಯಗಳಾದ ನೇಮೋತ್ಸವ, ಜಾನಪದ ಕಲೆಗಳಾದ ಕಂಬಳ ಇನ್ನಿತರ ಜಾನಪದ ಆಚರಣೆಗಳನ್ನು ಅವರ ನೇತೃತ್ವದಲ್ಲಿ ಕಟ್ಟುಕಟ್ಟಳೆ ಪ್ರಕಾರ ನಡೆಸುವುದು ಸೀಮೆಯ ಸಂಪ್ರದಾಯ. ಅವರ ಪಟ್ಟಾಭಿಷೇಕ ರಜತ ಮಹೋತ್ಸವವನ್ನು ಕೋವಿಡ್-೧೯ರ ಹಿನ್ನಲೆಯಲ್ಲಿ ಸರಕಾರದ ನಿಯಮ ಪಾಲಿಸಿ ಸರಳವಾಗಿ
ಆಚರಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಶಶಿಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿ ಅಜಿತ್ ಎನ್. ನಾವರ, ಸಂಚಾಲಕ ಶಿವಪ್ರಸಾದ ಅಜಿಲ, ಉಪಾಧ್ಯಕ್ಷರುಗಳಾದ ಎಂ. ಗಂಗಾಧರ ಮಿತ್ತಮಾರು, ಜಗದೀಶ್ ಹೆಗ್ಡೆ, ಪ್ರವೀಣ್‌ಕುಮಾರ್ ಇಂದ್ರ, ಪಿ.ಕೆ ರಾಜುಪೂಜಾರಿ, ಪಿ.ಹೆಚ್ ನಿತ್ಯಾನಂದ ಶೆಟ್ಟಿ, ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ಸುಕೀರ್ತಿ ಅಜ್ರಿ, ಜೊತೆ ಕಾರ್ಯದರ್ಶಿ ಮಿತ್ರಸೇನ ಉಪಸ್ಥಿತರಿದ್ದರು.
——————————
ಡಿ.೧ರಂದು ಪೂರ್ವಾಹ್ನ ೬.೪೫ಕ್ಕೆ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಗಂಟೆ ೭ಕ್ಕೆ ಬರಾಯ ಅರಮನೆಯಲ್ಲಿ ಹಿರಿಯರ ಸ್ಮೃತಿ ಹಾಗೂ ಧರ್ಮದೇವತೆಗಳ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಗಂಟೆ ೭.೩೦ಕ್ಕೆ ಅಳದಂಗಡಿ ದೊಡ್ಡ ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ. ಗಂಟೆ ೮ಕ್ಕೆ ಪಟ್ಟದ ಉಯ್ಯಾಲೆಯಲ್ಲಿ ಆಸೀನರಾಗಿ ಸೀಮೆಯ ಪ್ರಮುಖರಿಂದ ಗೌರವ ಸ್ವೀಕಾರ ಗಂಟೆ ೮.೩೦ರ ಬಳಿಕ ಸಾರ್ವಜನಿಕರಿಂದ ಗೌರವ ಸ್ವೀಕಾರ. ಡಿ.೨೨ ಅರಮನೆಯಲ್ಲಿ ಧರ್ಮನೇಮೋತ್ಸವ ಕಾರ್ಯಕ್ರಮ.
—————————————————-

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.