ಕಲ್ಮಂಜ ಮನೆ ದರೋಡೆ ಯತ್ನ ಪ್ರಕರಣ: ಕಲ್ಮಂಜ ಹಾಗೂ ಬೆಳಾಲಿನ ಇಬ್ಬರು ಸೇರಿ ನಾಲ್ವರ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರೂ.8 ಲಕ್ಷ ಮೌಲ್ಯದ ಸೊತ್ತುಗಳ ವಶ: ಸಿಪಿಐ ಬೆಳ್ತಂಗಡಿ ಮತ್ತು ಪಿಎಸ್‌ಐ ಧರ್ಮಸ್ಥಳ ಹಾಗೂ ಸಿಬ್ಬಂದಿಗಳ ಸೂಕ್ತ ಕಾರ್ಯಾಚರಣೆ

ಕಲ್ಮಂಜ: ಇಲ್ಲಿಯ ನಿಡಿಗಲ್ ಎಂಬಲ್ಲಿ ಮನೆ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಿಪಿಐ ಬೆಳ್ತಂಗಡಿ ಮತ್ತು ಪಿಎಸ್‌ಐ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಆರಪಿಗಳಿಂದ ಸುಮಾರು ರೂ 8 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳ್ತಂಗಡಿ ವೃತ್ತದ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ, ನಿಡಿಗಲ್ ಎಂಬಲ್ಲಿ ಮನೆ ದರೋಡೆ ಯತ್ನ ಪ್ರಕರಣ ನಡೆದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ,ಮೇಲಾಧಿಕಾರಿಗಳ ಆದೇಶದಂತೆ ಇದರ ಪತ್ತೆ ಬಗ್ಗೆ ಸಿಪಿಐ ಬೆಳ್ತಂಗಡಿ ಮತ್ತು ಪಿಎಸ್‌ಐ ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಎರಡು ತಂಡಗಳನ್ನು ರಚಿಸಲಾಗಿತ್ತು.
ಬಂಟ್ವಾಳ ತಾಲೂಕಿನ ಮೇಲ್ಕಾರ್ ಬಳಿ ಪಿ ಇರ್ಫಾನ್(28) ಬಿನ್ ದಿ.ಮಹಮ್ಮದ್ ಹನೀಫ್, ಬಜಾಲ್ ಪಡ್ಪು ಮನೆ, ಬಜಾಲ್ ಗ್ರಾಮ, ಮಂಗಳೂರು ತಾಲೂಕು ಮತ್ತು ಮಹಮ್ಮದ್ ತೌಸೀಫ್ @ ತಚ್ಚು, (26)ಬಿನ್ ಅಬ್ದುಲ್ ಲತೀಫ್, ವಳಚ್ಚಿಲ್ ಮನೆ, ಅರ್ಕುಳ ಗ್ರಾಮ, ಮಂಗಳೂರು ತಾಲೂಕು ಇವರಿಬ್ಬರು ಆರೋಪಿಗಳು ಇರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಮಾಹಿತಿಯಂತೆ ಇತರ ಆರೋಪಿಗಳಾದ ಬೆಳಾಲು ಗ್ರಾಮದ ಪರಾಳ ಮನೆಯ ದಿ. ಶಿವಪ್ಪ ರವರ ಪುತ್ರ ಚಿದಾನಂದ ಗೌಡ(25) ಮತ್ತು ಕಲ್ಮಂಜ ಗ್ರಾಮದ ಕಂದೂರು ಮನೆಯ ಶಿವರಾಮ್ ಟಿ ಯವರ ಪುತ್ರ ಮೋಹನ (32)ಎಂಬವರುಗಳನ್ನು ವಶಕ್ಕೆ ಪಡೆದು ಠಾಣೆಗೆ ತಂದು ಕೂಲಂಕುಶವಾಗಿ ವಿಚಾರಿಸಿದಾಗ, ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಮನೆ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಈ ಪ್ರಕರಣದಲ್ಲಿ ದಸ್ತಗಿಯಾಗಿರುವ ಮಹಮ್ಮದ್ ತೌಸೀಫ್ @ ತಚ್ಚು ಈ ಮೊದಲು ಅನೇಕ ಪ್ರಕಣಗಳಲ್ಲಿ ಭಾಗಿರುವುದಾಗಿದೆ. ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ದಸ್ತಗಿರಿಗೆ ಬಾಕಿ ಇರುತ್ತದೆ. ಮೇಲಿನ ಆರೋಪಿತರುಗಳಿಂದ ಪ್ರಕರಣದಲ್ಲಿ ಭಾಗಿಯಾಗಿರುವ ಮಾರುತಿ ಸುಜುಕಿ ಕಂಪೆನಿಯ ವಿಟರಾ ಬ್ರೀಝಾ ಹಾಗೂ ಸ್ವಿಫ್ಟ್ ಕಾರು, ತಲುವಾರು ಮತ್ತು ಕಬ್ಬಿಣದ ರಾಡ್ ಹಾಗೂ ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 8,00,000/-. ಆಗಿರುತ್ತದೆ.
ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ ಲಕ್ಷ್ಮೀ ಪ್ರಸಾದ್ ಐಪಿಎಸ್ ರವರ ಮಾರ್ಗದರ್ಶನದಂತೆ, ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ವೆಲೈಂಟೈನ್ ಡಿ’ಸೋಜಾರವರ ನಿರ್ದೇಶನದಂತೆ, ಸಂದೇಶ್ ಪಿಜಿ ಸಿಪಿಐ ಬೆಳ್ತಂಗಡಿ, ಪವನ್ ನಾಯಕ್ ಪಿಎಸ್‌ಐ, ಧರ್ಮಸ್ಥಳ ಚಂದ್ರಶೇಖರ್ ಕೆ .ಪಿಎಸ್‌ಐ, ಧರ್ಮಸ್ಥಳ ಮತ್ತು ಪತ್ತೆ ತಂಡದಲ್ಲಿ ಸಿಬ್ಬಂದಿಗಳಾದ ತೋಮಸ್ ಇಜಿ, ಬೆನ್ನಿಚ್ಚನ್, ವಿಶ್ವನಾಥ್ ನಾಯ್ಕ್, ವಿಜು ಎಂಜಿ, ರಾಜೇಶ್ ಎನ್, ಪ್ರವೀಣ್ ಇಬ್ರಾಹಿಂ ಗರ್ಡಾಡಿ, ಅಬ್ದುಲ್ ಲತೀಫ್, ಪ್ರಮೋದ್ ನಾಯ್ಕ್, ಮಹಮ್ಮದ್ ಅಸ್ಲಾಂ, ರಾಹುಲ್ ಹಾಗೂ ಗಣಕ ಯಂತ್ರ ವಿಭಾಗದ ದಿವಾಕರ್ , ಸಂಪತ್ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.