ಕಳೆಂಜದಲ್ಲಿ 7 ಕಾಲುಗಳಿರುವ ಕರುವಿನ ಜನನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅವಳಿ ಕರುಗಳಿಗೆ ಜನ್ಮ ನೀಡಿದ ಹಸು: ಕಾಯರ್ತಡ್ಕದಲ್ಲಿ ನಡೆದ ವಿಸ್ಮಯಕಾರಿ ಘಟನೆ

ಕಳೆಂಜ: ಇಲ್ಲಿಯ ಕಾಯರ್ತಡ್ಕ ಎಂಬಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಒಂದು ಕರು ಏಳು ಕಾಲುಗಳನ್ನು ಹೊಂದಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಕಳೆಂಜ ಗ್ರಾಮದ ಕಾಯರ್ತಡ್ಕ ನಿವಾಸಿ ಬರಮೇಲು ಬೊಮ್ಮಣ್ಣ ಗೌಡರ ಮನೆಯ ಹಸುವಿಗೆ ನ.22 ರಂದು ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇಂದು ಬೆಳಿಗ್ಗಿನ ಜಾವದವರೆಗೂ ಹಸುವಿಗೆ ಪ್ರಸವವಾಗದ ಕಾರಣ ಮನೆಯವರು ಪಶುವೈದ್ಯ ಯಾದವ ರಿಗೆ ವಿಷಯ ತಿಳಿಸಿದ್ದರು. ನಂತರ ಸ್ಥಳಕ್ಕೆ ಧಾವಿಸಿದ ಪಶು ವೈದ್ಯರು ಮತ್ತು ಸ್ಥಳೀಯರಾದ ರಾಘವ ರವರ ಸಹಕಾರದಿಂದ ಅವಳಿ ಕರುಗಳನ್ನು ಹೊರಕ್ಕೆ ತೆಗೆದಿದ್ದು, ಅದರಲ್ಲಿ ಒಂದು ಕರು ಸಾಮಾನ್ಯ ಕರುವಿನಂತೆ ಸಹಜ ಸ್ಥಿತಿಯಲ್ಲಿದ್ದು, ಇನ್ನೊಂದು ಕರು ಏಳು ಕಾಲುಗಳನ್ನು ಹೊಂದಿದೆ. ಹಸು ಕರು ಹಾಕುವ ಸಂದರ್ಭದಲ್ಲೇ ಈ ವಿಚಿತ್ರ ಕರುಗಳು ಸಾವನ್ನಪ್ಪಿದ್ದು, ವೈದ್ಯರು ಹರಸಾಹಸಪಟ್ಟು ಈ ಕರುಗಳನ್ನು ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ ಹಸು ಆರೋಗ್ಯವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.