ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆ ಶಾಂತಿವನ ಇಲ್ಲಿ ಅನುವರ್ತನಾ ಚಿಕಿತ್ಸಾ ಘಟಕ ಉದ್ಘಾಟನಾ ಸಮಾರಂಭವು ನ.23 ರಂದು ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ಉದ್ಘಾಟನೆಯನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಚ್ಛನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಜಿಲ್ಲಾ ನ್ಯಾಯಧೀಶರು ಲೋಕಾಯುಕ್ತ ಕನಾ೯ಟಕ ಹೆಚ್ ಎ ಮೋಹನ್ ಉಪಸ್ಥಿತರಿದ್ದರು. ಪ್ರಮುಖರಾದ ಬಿ ಸೀತಾರಾಮ ತೋಳ್ಪಡಿತ್ತಾಯ, ಜಗನ್ನಾಥ, ಢಾ| ಶಿವ ಪ್ರಸಾದ್ ಶೆಟ್ಟಿ, ಡಾ| ಶಶಿಕಾಂತ್ ಜೈನ್, ಡಾ| ಶಶಿಕಿರಣ ಮೊದಲಾದವರು ಉಪಸ್ಥಿತರಿದ್ದರು.
ಅನುವರ್ತನಾ ಚಿಕಿತ್ಸೆ: ಅನುವರ್ತನಾ ಚಿಕಿತ್ಸೆಯಲ್ಲಿ ಮಾನವನ ಪಾದಗಳಿಗೆ ಸೂಕ್ತ ಮಸಾಜ್ ನೀಡಿ ದೇಹದ ಎಲ್ಲಾ ಅಂಗಾಂಗಗಳಿಗೆ ಹಾಗೂ ಮನಸ್ಸಿಗೂ ಮುದ ನೀಡಲು ಮತ್ತು ಒತ್ತಡದ ಮನಸ್ಸು ನಿರಾಳವಾಗಲು ಸಹಕಾರಿಯಾಗುತ್ತದೆ. ಪ್ರಾಚೀನ ವೈದ್ಯ ಪದ್ದತಿಯಂತೆ ಪಾದಗಳಿಗೆ ವಿಶೇಷ ಆರೈಕೆ ಮತ್ತು ದೇಹದ ವಿವಿಧ ಭಾಗಗಳಿಗೆ ಪಾದದ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ.