HomePage_Banner_
HomePage_Banner_

ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ನವೀಕೃತ ಕೇಂದ್ರ ಕಚೇರಿ ಹಾಗೂ ಆಡಳಿತ ಮಂಡಳಿ ಸಭಾಂಗಣ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ನವೀಕೃತ ಕೇಂದ್ರ ಕಚೇರಿ ಹಾಗೂ ಆಡಳಿತ ಮಂಡಳಿ ಸಬಾಂಗಣವನ್ನು ನ.20 ರಂದು ಸರಳವಾಗಿ ಉದ್ಘಾಟನೆ ಮಾಡಲಾಯಿತು. ಕಚೇರಿ ಹಾಗೂ ಆಡಳಿತ ಮಂಡಳಿ ಸಭಾಂಗಣವನ್ನು ಸಂಘದ ಮುಖ್ಯ ಪ್ರವರ್ತಕರು, ಮಾಜಿ ಶಾಸಕರು ಹಾಗೂ ಸಂಘದ ನಿರ್ದೇಶಕರು ಆಗಿರುವ ಕೆ ವಸಂತ ಬಂಗೇರ ಹಾಗೂ ಸಂಘದ ಅಧ್ಯಕ್ಷರಾದ ಎನ್ ಪದ್ಮನಾಭ ಮಾಣಿಂಜ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಭಗೀರಥ ಜಿ, ಶ್ರೀಮತಿ ಸುಜಿತಾ ವಿ ಬಂಗೇರ, ಶ್ರೀಮತಿ ತನುಜಾ ಶೇಖರ, ಜಗದೀಶ್ಚಂದ್ರ ಡಿ.ಕೆ, ಸಂಜೀವ ಪೂಜಾರಿ, ಸತೀಶ್ ಕಾಶಿಪಟ್ಣ, ಶೇಖರ ಬಂಗೇರ, ಚಂದ್ರಶೇಖರ, ಧರ್ಣಪ್ಪ ಪೂಜಾರಿ ಹಾಗೂ ಸಂಘದ ವಿಶೇಷಾಧಿಕಾರಿಯಾಗಿರುವ ಯಂ ಮೋನಪ್ಪ ಪೂಜಾರಿ ಕಂಡೆತ್ಯಾರು, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್, ಭೂ ಮೌಲ್ಯಮಾಪಕರಾದ ಅಶೋಕ್ ಬಿ, ಬ್ಯಾಂಕ್ ಆಪ್ ಬರೋಡದ ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಕೇಂದ್ರ ಕಚೇರಿ ವ್ಯವಸ್ಥಾಪಕರಾದ ಕೀರ್ತನ್ ಕುಮಾರ್, ಮಾರಾಟಧಿಕಾರಿ ಶಿವಪ್ರಕಾಶ್, ಶಾಖಾ ವ್ಯವಸ್ಥಾಪಕರಾದ ಪ್ರಶಾಂತ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.