ಶ್ರೀ ಗುರುದೇವ ಕಾಲೇಜು: ವಿದ್ಯಾರ್ಥಿಗಳ ದತ್ತು ಸ್ವೀಕರಿಸಿದ ದಾನಿಗಳಿಗೆ ಅಭಿನಂದನೆ

ಬೆಳ್ತಂಗಡಿ: ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್ ಬೆಳ್ತಂಗಡಿ ಇದರ ಆಡಳಿತಕ್ಕೊಳಪಟ್ಟ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿದ ಗೌರವಿನ್ವಿತರಿಗೆ ಅಭಿನಂದನಾ ಸಮಾರಂಭ ನ.21ರಂದು ಕಾಲೇಜು ಸಭಾಂಗಣದಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಾಗೂ ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಕೆ.ವಸಂತ ಬಂಗೇರ ವಹಿಸಿದ್ದರು.


ಕಾಯ೯ಕ್ರಮದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಪದ್ಮನಾಭ ಮಾಣಿಂಜ, ಕಾಯ೯ದಶಿ೯ ಧಮ೯ವಿಜೇತ್, ಕೋಶಧಿಕಾರಿ ಗಂಗಾಧರ ಮಿತ್ತಮಾರು, ಟ್ರಸ್ಟ್ ನ ಸದಸ್ಯರಾದ ಪ್ರೀತಿತಾ ಧಮ೯ವಿಜೇತ್, ಬಿನುತಾ ಬಂಗೇರ, ಸಂಜೀವ ಕಣೇಕಲ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ದತ್ತು ಸ್ವೀಕಾರ ಮಾಡಿದ ಗಣ್ಯರುಗಳಾದ ಪದ್ಮನಾಭ ಮಾಣಿಂಜ, ಶಿವಪ್ರಸಾದ್ ಅಜಿಲ, ವೀರಮ್ಮ ಸಂಜೀವ ಸಾಲ್ಯಾನ್, ನಿತ್ಯಾನಂದ ನಾವರ,ಕಿರಣ್ ಕುಮಾರ್ ಮಂಜಿಲ, ಚಿದಾನಂದ ಪೂಜಾರಿ ಎಲ್ದಡ್ಕ, ನಾರಾಯಣ ಸುವಣ೯,ಮನೋಹರ್ ಇಳಂತಿಲ,ಡಾ.ಹರಿ ಪ್ರಸಾದ್ ಸುವಣ೯, ಸಂಪತ್ ಮತ್ತು ಸನತ್, ಪ್ರವೀಣ್ ಕುಮಾರ್ ಹೆಚ್.ಎಸ್, ರಾಜಶ್ರೀ ರಮಣ್, ಯಶೋಧ ಕುತ್ಲೂರು, ಶಾಂಭವಿ ಪಿ.ಬಂಗೇರ, ಹರೀಶ್ ಎಳನೀರು, ನೀತೆೆಶ್ ವೇಣೂರು, ಮುಸ್ಲಿಂ ವೇಲ್ ಫೇರ್ ಅಸೋಸಿಯೇಷನ್ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಮನೋಹರ್ ಇಳಂತಿಲ ಹಾಗೂ ರಾಜಶ್ರೀ ರಮಣ್ ಅನಿಸಿಕೆ ವ್ಯಕ್ತಪಡಿಸಿದರು. ಅಂಜನಿ ರಾವ್ ಪ್ರಾಥಿ೯ಸಿದರು. ಉಪನ್ಯಾಸ ಶಮೀವುಲ್ಲಾ ಸ್ವಾಗತಿಸಿದ ರು. ಬಿನುತಾ ಬಂಗೇರ ಅಭಿನಂದನಾ ಭಾಷಣ ಮಾಡಿದರು. ಉಪನ್ಯಾಸ ಕರಾದ ಪವಿತ್ರಾ ಹಾಗೂ ಹೇಮಾವತಿ, ಪ್ರಾಂಶುಪಾಲಕರಾದ ಡಾ.ಪ್ರವೀಣ್ ಬಿ. ಮತ್ತು ಸುಕೇಶ್ ಕುಮಾರ್ ಕೆ. ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಗಣೇಶ್ ಬಿ.ಕಾಯ೯ಕ್ರಮ ನಿರೂಪಿಸಿ, ಹರೀಶ್ ಪೂಜಾರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.