HomePage_Banner_
HomePage_Banner_

ನಾಳ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ.

ನಾಳ: ಹಾಲು ಉತ್ಪಾದಕರ ಸಹಕಾರ ಸಂಘ ನಾಳ ಇದರ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ನ.20ರಂದು ಸಂಘದ “ಕ್ಷೀರ ಗಂಗಾ”ಸಭಾಂಗಣದಲ್ಲಿ ನಡೆಯಿತು.
ಆರ್ಥಿಕ ತಖ್ತೆಗಳು ಮತ್ತು ವರದಿಯನ್ನು ಕಾರ್ಯದರ್ಶಿ ಸೌಮ್ಯ ಎಂ. ಸಭೆಯಲ್ಲಿ ಮಂಡಿಸಿದರು. 2019-20ನೇ ಸಾಲಿನ ನಿವ್ವಳ ಲಾಭ ರೂ.5,08,363 ಲಾಭ ಗಳಿಸಿದೆ. ರೂ.2,42,871ನ್ನು ಹಾಲು ಉತ್ಪಾದಕರಿಗೆ ಬೋನಸ್ ಕೊಡಲು ತೀರ್ಮಾನಿಸಲಾಯಿತು. ಹಾಗೂ ಸದಸ್ಯರಿಗೆ 23 ಶೇಕಡ ಡಿವಿಡೆಂಟ್ ಪಾವತಿಸಲು ತೀರ್ಮಾನಿಸಲಾಯಿತು.
ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧಾರಕ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಮಾಹಿತಿಯನ್ನು ನೀಡಿದರು.
ಪಶುವೈದ್ಯ ಅಧಿಕಾರಿ ಡಾ.ಗಣಪತಿ ಮಂಗಳೂರು ಹಾಲು ಒಕ್ಕೂಟದ ಬೆಳ್ತಂಗಡಿ ವಿಸ್ತರಣಾಧಿಕಾರಿ ಸುಚಿತ್ರಾ ಉಪಯುಕ್ತ ಮಾಹಿತಿಗಳನ್ನು ಸದಸ್ಯರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ನಿಕಟ ಪೂರ್ವಾಧ್ಯಕ್ಷ ಗಣಪತಿ ಭಟ್ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಿರ್ದೇಶಕರಾದ ಕೇಶವ ಪೂಜಾರಿ, ವಿಠ್ಠಲ ಗೌಡ, ಬೊಮ್ಮಣ್ಣ ಗೌಡ, ಸೋಮಪ್ಪ ಗೌಡ, ಶ್ರೀಧರ ಪೂಜಾರಿ, ರೇಖಾ, ರೀತಾ ಕೆ, ರಮೇಶ ಶೆಟ್ಟಿ, ಜಗದೀಶ ಪೂಜಾರಿ ಮತ್ತು ನೀಲಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು. ಸೌಮ್ಯ ಎಮ್. ಸ್ವಾಗತಿಸಿ, ಹಾಲು ಪರೀಕ್ಷಕ ಕೆ.ವೆಂಕಪ್ಪ ಪೂಜಾರಿ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.