ಅರಂಬೋಡಿ ಗ್ರಾಮದ ಕೋಡ್ಯೇಲು ನಿವಾಸಿ ಸಮರ್ಥ್ ಆಕಸ್ಮಿಕ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಮರ್ಥ್ 

ಬೆಳ್ತಂಗಡಿ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೊರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನ.19 ರಂದು ಸಿದ್ಧಕಟ್ಟೆ ಸಮೀಪದ ಆರಂಬೋಡಿ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಆರಂಬೋಡಿ ಗ್ರಾಮದ ಕೋಡ್ಯೆಲು ಮನೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರ ಸಮರ್ಥ್ ( 16.ವ ) ಎಂದು ಗುರುತಿಸಲಾಗಿದೆ.
ಸಿದ್ಧಕಟ್ಟೆ ಗುಣಶ್ರೀ ಆಂಗ್ಲಮಾಧ್ಯಮ ಶಾಲೆಯ  ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಸಮರ್ಥ್ ರವರು ನ.19ರಂದು ಬೆಳಿಗ್ಗೆ ನೋಟ್ಸ್ ಬುಕ್ ತಿದ್ದುಪಡಿಗಾಗಿ ಶಾಲೆಗೆ ತೆರಳಿದ್ದರು.  ಸಂಜೆವರೆಗೂ ಅವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಮಂದಿ  ಹುಡುಕಾಟ ನಡೆಸಿದ್ದು, ಮನೆ ಸಮೀಪದ ಕೆರೆಯಲ್ಲಿ  ಸಮರ್ಥ್ ರವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸಮರ್ಥ್ರವರು ಶೈಕ್ಷಣಿಕ, ಸಾಂಸ್ಕ್ರತಿಕ ಮತ್ತಿತರ ಪಾಠ್ಯೇತರ ಚಟುವಟಿಕೆಯಲ್ಲೂ ಮುಂಚೂಣಿಯ ವಿದ್ಯಾರ್ಥಿಯಾಗಿದ್ದರು ಎನ್ನಲಾಗುತ್ತಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.