ಉಜಿರೆ ಗ್ರಾ.ಪಂ.ವಿಶೇಷ ಗ್ರಾಮ ಸಭೆ

94  ಅರ್ಹನಿವೇಶನರಹಿತ  ಫಲಾನುಭವಿಗಳಿಗೆ ನಿವೇಶನ ಹಂಚಿಕೆ   

ಉಜಿರೆ : ಉಜಿರೆ  ಗ್ರಾಮ  ಪಂಚಾಯತ್ ವ್ಯಾಪ್ತಿಯ ಒಟ್ಟು 94   ಅರ್ಹ ನಿವೇಶನ ರಹಿತ ಫಲಾನುಭವಿಗಳಿಗೆ  ಇಚ್ಚಿಲದಲ್ಲಿ ಗುರುತಿಸಲಾದ  ಸ್ಥಳದಲ್ಲಿ ತಲಾ  30  ಅಡಿ 40  ಅಡಿ ವಿಸ್ತೀರ್ಣದ  ನಿವೇಶನ  ಹಂಚಿಕೆ ಮಾಡಲಾಗಿದೆ ಎಂದು ಉಜಿರೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ! ಎಂ.ಎಸ ಯತೀಶ್ ಕುಮಾರ್  ಪ್ರಕಟಿಸಿದರು.

ಉಜಿರೆ ಗ್ರಾಮ ಪಂಚಾಯತ್ ನ ಸುವರ್ಣ ಸೌಧದಲ್ಲಿ ನ 20 . ರಂದು ನಡೆದ ವಿಶೇಷ ಗ್ರಾಮ ಸಭೆಯಲ್ಲಿ  ಗ್ರಾಮದ ನಿವೇಶನರಹಿತರ  ಆಯ್ಕೆ ಪ್ರಕ್ರಿಯೆ ನಡೆದು ಅಂತಿಮವಾಗಿ  ನಿವೇಶನ ಹಂಚಿಕೆ  ಪ್ರಕಟಿಸಲಾಯಿತು . ಆನ್ ಲೈನ್ ಮೂಲಕ  ಒಟ್ಟು 264  ಮಂದಿ ನಿವೇಶನಕ್ಕಾಗಿ ಹೆಸರು ನೋಂದಾಯಿಸಿದ್ದರು . ಹೊಸದಾಗಿ ಸೇರ್ಪಡೆಗೆ ಅವಕಾಶವಿರಲಿಲ್ಲ .ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ  ಹೆಸರು ಪ್ರಕಟಿಸಲಾಯಿತು .

ಈ ಪಟ್ಟಿಯಲ್ಲಿ ಈಗಾಗಲೇ 94  ಸಿ  ಯನ್ವಯ ನಿವೇಶನ ಮಂಜೂರಾತಿ ಪಡೆದವರು   ಹಾಗು ಬೇರೆ ಕಡೆ ನಿವೇಶನ ಹೊಂದಿ  ಇಲ್ಲಿ ನಿವೇಶನ ಪಡೆಯಲು ಅನರ್ಹರಿದ್ದಲ್ಲಿ  ಅಂಥವರ ಹೆಸರನ್ನು ಒಂದು ವಾರದೊಳಗಾಗಿ  ಕಚೇರಿಗೆ ದಾಖಲೆ ಸಹಿತ ದೂರು ನೀಡಿದರೆ   ಅವರ ಹೆಸರನ್ನು ಪಟ್ಟಿಯಿಂದ ವಜಾ ಮಾಡಲಾಗುವುದು .  ಇಂದು ಆಯ್ಕೆಯಾದ  94  ಫಲಾನುಭವಿಗಳಿಗೆ  ಮೇಲಧಿಕಾರಿಗಳ ಅನುಮತಿ ನಂತರ ಹಕ್ಕು ಪತ್ರ ವಿತರಿಸಲಾಗುವುದು. ಉಳಿದ ನಿವೇಶನರಹಿತರಿಗೆ ಅರಳಿಯಲ್ಲಿ  ನಿವೇಶನ ಸಮತಟ್ಟುಗೊಳಿಸಿ ನಂತರ  ಹಂಚಿಕೆ ಪ್ರಕ್ರಿಯೆ ನಡೆಸಲಾಗುವುದು  ಎಂದು  ಗ್ರಾ.ಪ. ಅಭಿವೃದ್ಧಿ ಅಧಿಕಾರಿ ಪ್ರಕಾಶ್  ಶೆಟ್ಟಿ ನೊಚ್ಚ  ಹೇ ಳಿದರು.

ಸರಕಾರದ ಮೀಸಲಾತಿ ನಿಯಮದಂತೆ   ಒಟ್ಟು 94  ನಿವೇಶನಗಳ ಪೈಕಿ  ಪರಿಶಿಷ್ಟ ಜಾತಿಗೆ  16 ,ಪರಿಶಿಷ್ಟ ಪಂಗಡಕ್ಕೆ 7  ಮತ್ತು ಸಾಮಾನ್ಯರಿಗೆ 71  ನಿವೇ ಶನಗಳನ್ನು ಹಂಚಿಕೆಗೆ ಇರಿಸಲಾಗಿದ್ದು , ಪರಿಶಿಷ್ಟ ಜಾತಿಗೆ ಬಂದ ಎಲ್ಲ  14  ಅರ್ಜಿದಾರರಿಗೆ ವಿತರಿಸಲಾಗಿ, ಉಳಿದ 2  ನಿವೇಶನವನ್ನು ಅಮಾನತಿನಲ್ಲಿರಿಸಲಾಗಿದೆ .. ಪರಿಶಿಷ್ಟ ಪಂಗಡದ 7  ಮತ್ತು ಸಾಮಾನ್ಯ ವರ್ಗದ 71  ನಿವೇಶನಗಳಿಗೆ  ಚೀಟಿ ಎತ್ತುವ ಮೂಲಕ  ಹಂಚಿಕೆ ಮಾಡಲಾಯಿತು .    ಅಂತೆಯೇ ಇಚ್ಚಿಲದ 94  ನಿವೇಶನದ  ಲೇಔಟ್ ನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ  ಚೀಟಿ ಎತ್ತುವ ಮೂಲಕ  ನಿವೇಶನ ಹಂಚಿಕೆ ಮಾಡಲಾಯಿತು.

ವಿಶೇಷ ಗ್ರಾಮ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಪೂಜಾರಿ ,ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಎಂ . ಕಾರ್ಯದರ್ಶಿ ಯು..ಬಿ .ಜಯಂತ್ , ಲೆಕ್ಕಾಧಿಕಾರಿ  ಉಪಸ್ಥಿತರಿದ್ದರು. ಸಭೆಯಲ್ಲಿ  ಗ್ರಾ.ಪ. ಮಾಜಿ ಸದಸ್ಯರು ,ಫಲಾನುಭವಿಗಳು,ಸಿಬ್ಬಂದಿವರ್ಗ ಉಪಸ್ಥಿತರಿದ್ದರು ಗ್ರಾ.ಪ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿ ,ಕೊನೆಯಲ್ಲಿ ವಂದಿಸಿದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.