HomePage_Banner_
HomePage_Banner_

ಪತಿ ನಿಧನರಾಗಿ 19 ದಿನಗಳ ಅಂತರದಲ್ಲಿ ಪತ್ನಿ ಸಾವು…

ಬೆಳ್ತಂಗಡಿ: ದೀರ್ಘ ವರ್ಷಗಳಿಂದ ಅನಾರೋಗ್ಯಕ್ಕೀಡಾಗಿ ಆರೈಕೆಯಲ್ಲಿದ್ದ ಪತಿ ಮೃತರಾದ 19 ದಿನಗಳ ಅಂತರದಲ್ಲಿ ಪತ್ನಿಯೂ ನಿಧನರಾದ ಘಟನೆ ಲಾಯಿಲ ಗ್ರಾಮದ ಕಕ್ಕ್ಯೇನ ಎಂಬಲ್ಲಿ ನಡೆದಿದೆ.
ಇಲ್ಲಿನ ಕಕ್ಕ್ಯೇನ ನಿವಾಸಿ ಅಬೂಬಕ್ಕರ್(67ವ.) ಮತ್ತು ಅವರ ಪತ್ನಿ ಖತೀಜಮ್ಮ(64ವ.) ದಂಪತಿ ನಿಧನರಾದವರು.
ಅಬೂಬಕ್ಕರ್ ಅವರು ಹಿಂದೆ ಐಸ್‌ಕೇಂಡಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ 13 ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾಗಿದ್ದರು. ಪತಿ ನಿಧನರಾಗುವ ಕೆಲ ದಿನಗಳ ಹಿಂದೆಷ್ಟೇ ಅವರನ್ನು ಅಷ್ಟೂ ವರ್ಷ ಆರೈಕೆ ಮಾಡಿದ್ದ ಪತ್ನಿ ಖತೀಜಮ್ಮ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಬಿಳಿ ರಕ್ತಕಣದ ತೀವ್ರಕೊರತೆ ಎದುರಾಗಿ ಅವರು ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಪತಿ ನಿಧನದ ಬಳಿಕ ಇದೀಗ ಅವರೂ ನಿಧನರಾಗಿದ್ದಾರೆ. ಇಬ್ಬರ ಅಂತ್ಯಸಂಸ್ಕಾರ ಉಜಿರೆ ಹಳೆಪೇಟೆ ಮಸ್ಜಿದ್‌ನ ದಫನಭೂಮಿಯಲ್ಲಿ ನೆರವೇರಿಸಲಾಗಿದೆ. ಮೃತ ದಂಪತಿ ಇಬ್ಬರು ಹೆಣ್ಣು ಮಕ್ಕಳಾದ ಮುಬೀನಾ ಮತ್ತು ಹಸೀನಾ, ಅಳಿಯ ಬಶೀರ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.