ಸುಪ್ರಿಂ ಗುರುವಾಯನಕೆರೆ’ ದೀಪಾವಳಿ ಬಂಪರ್ ಬಹುಮಾನ ಲಕ್ಕಿ ಡ್ರಾ

ಕಠಿಣ ಪರಿಶ್ರಮದ ಫಲಿತಾಂಶವಾಗಿ ‘ಸುಪ್ರಿಂ’ ಸಂಸ್ಥೆ ಇಂದು ಬೆಳೆದಿದೆ: ಡಾ.ಶರ್ಮ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ವೇಣುಗೋಪಾಲ ಶರ್ಮ ಅವರನ್ನು ಸನ್ಮಾನಿಸುತ್ತಿರುವುದು.

ಗುರುವಾಯನಕೆರೆ: ಶ್ರಮ ಜೀವಿಯಾದ ತಂದೆಯ ಆದರ್ಶದಲ್ಲಿ ಮಕ್ಕಳು ಜೊತೆಗಾರರಾಗಿ ಕಠಿಣ ದುಡಿಮೆಯ ಮೂಲಕ ಕಟ್ಟಿದ ಸುಪ್ರಿಂ ಸೋಫಾ ಮಾರ್ಟ್ ಸಂಸ್ಥೆ ಇದೀಗ ಎಲೆಕ್ಟ್ರಾನಿಕ್ಸ್, ಫರ್ನಿಚರ್ಸ್ ಹಾಗೂ ಬೇರೆ ಬೇರೆ ವಿಭಾಗಗಳಾಗಿ ಈ ಮಟ್ಟಕ್ಕೆ ಮಾದರಿಯಾಗಿ ಬೆಳೆದಿದೆ ಎಂದು ಡಾ. ವೇಣುಗೋಪಾಲ ಶರ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಪ್ರಿಂ ಸೋಫಾ ಮಾರ್ಟ್, ಇಲೆಕ್ಟ್ರಾನಿಕ್ಸ್ ಏಂಡ್ ಫರ್ನಿಚರ್ಸ್ ಸಂಸ್ಥೆ ಗುರುವಾಯನಕೆರೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಗ್ರಾಹಕರ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾರಂಭದ ಅತಿಥಿಯಾಗಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ಶುಭಕೋರಿದರು. ವೇದಿಕೆಯಲ್ಲಿ ಸುವರ್ಣ ಸ್ಟುಡಿಯೋ ಮಾಲಕ ಪಾಲಾಕ್ಷ ಪಿ ಸುವರ್ಣ, ಸಂಸ್ಥೆಯ ಮಾಲಕ ಎಂ ಅಬ್ದುಲ್ಲ, ಕಟ್ಟಡದ ಮಾಲಕ ಫೆಲಿಕ್ಸ್ ಪಿಂಟೋ, ಬಜಾಜ್ ಫೈನಾನ್ಸ್ ಮೆನೇಜರ್ ಸಚಿನ್, ನಿರ್ದೇಶಕ ದೇವಿಪ್ರಸಾದ್ , ಪ್ರಮುಖರಾದ ಹಮೀದ್ ಆಳಂದಿಲ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಮಾಲಕ ಸಹೋದರರಾದ ಜಲೀಲ್, ಝುಬೈರ್, ಯೂನುಸ್, ಜಬ್ಬಾರ್, ಮನ್ಸೂರ್ ಮತ್ತು ರಶೀದ್, ಸಿಬ್ಬಂದಿಗಳಾದ ಇರ್ಶಾದ್, ಪ್ರಶಾಂತ್, ರಿಝ್ವಾನ್, ಅಫ್ರೀದ್, ಅಶ್ರಫ್, ಅಚ್ಚುತ, ಅನಂತ ಆಚಾರ್ಯ, ಆರಿಫ್ , ಶಿವರಾಜ ಮೊದಲಾದವರು ಭಾಗಿಯಾಗಿದ್ದರು. ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ಸಂಯೋಜಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.