HomePage_Banner_
HomePage_Banner_

ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದಿಂದ ನ್ಯಾಯತರ್ಪು ಬಡಕುಟುಂಬಕ್ಕೆ ವೈದ್ಯಕೀಯ ನೆರವು

ಬೆಳ್ತಂಗಡಿ: ನ್ಯಾಯತರ್ಪು ಗ್ರಾಮದ ಕರತ್ತೂರು ನಿವಾಸಿ ಉಮೇಶ ಗೌಡ ರವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ನವೆಂಬರ್ ತಿಂಗಳ 14ನೇ ಸೇವಾ ಯೋಜನೆಯಡಿ ರೂ.10,000 ಧನಸಹಾಯವನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ಧರ್ಣಪ್ಪ ಗೌಡ ಬಾನಡ್ಕ ಬಂದಾರು ಇವರ ಮೂಲಕ ಫಲಾನುಭವಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು, ತಾಲೂಕು ಗೌಡರ ಯಾನೆ ಸೇವಾ ಸಂಘದ ನಿರ್ದೇಶಕರುಗಳಾದ ರಾಜೀವ ಗೌಡ ಧರ್ಮಸ್ಥಳ, ಶ್ರೀನಾಥ ಗೌಡ ಏಒ ಬೆಳ್ತಂಗಡಿ, ವಾಣಿ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ವಾಣಿ ಸೌಹಾರ್ದ ಕೋ-ಅಪರೆಟೀವ್ (ಲಿ.) ನ ನಿರ್ದೇಶಕ ಸುರೇಶ್ ಕೌಡಂಗೆ ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.