HomePage_Banner_
HomePage_Banner_

ಸುದ್ದಿ ವರದಿಯ ಫಲಶ್ರುತಿ: ತೋಟತ್ತಾಡಿ ಬಡ ಕುಟುಂಬಕ್ಕೆ ಸಂಘಟನೆಗಳಿಂದ ಮೂಲ ಸೌಕರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೋಟತ್ತಾಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯದಳ ಚಾರ್ಮಾಡಿ, ಕಕ್ಕಿಂಜೆ ಮತ್ತು ವಿಶ್ವ ಹಿಂದೂ ಪರಿಷತ್, ಬಜರಂಗದಳ ತೋಟತ್ತಾಡಿ ಇವುಗಳ ಸಹಕಾರದೊಂದಿಗೆ, ಊರವರ ಮತ್ತು ದಾನಿಗಳ ಪೂರ್ಣ ಸಹಕಾರದಿಂದ ತೋಟತ್ತಾಡಿ ಗ್ರಾಮದ ಬರಮೇಲು ಕೊಪ್ಪ ಹರೀಶ್-ಭವಾನಿ ಕುಲಾಲ್ ಕುಟುಂಬಕ್ಕೆ ಮನೆಗೆ ವಿದ್ಯುತ್ ಸಂಪರ್ಕ, ಸ್ನಾನಗೃಹ, ಶೌಚಾಲಯವನ್ನು ರೂ.1.30ಲಕ್ಷ ವೆಚ್ಚದಲ್ಲಿ ನಿರ್ಮಿಸಿ ನ.೧೯ರಂದು ಹಸ್ತಾಂತರಿಸಲಾಯಿತು.

ಸರಳ ಸಮಾರಂಭದ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್‌ಸಿಂಹ ನಾಯಕ್ ದೀಪಬೆಳಗಿಸಿ ಉದ್ಘಾಟಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಮಾಜದ ವ್ಯವಸ್ಥೆಗಳನ್ನು ತಲುಪಿಸಿ ಅವರ ಬದುಕಿಗೆ ಬೆಳಕು ನೀಡುವುದು ನಿಜವಾದ ಸಂಘಟನೆಗಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್, ರೋಟರಿ ಸಮುದಾಯದಳ, ವಿಶ್ವಹಿಂದೂ ಪರಿಪತ್, ಭಜರಂಗದಳ ಚಾರ್ಮಾಡಿ, ಕಕ್ಕಿಂಜೆ ಮಾಡಿದ್ದಾರೆ ಎಂದರು.

ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ಬಡಕುಟುಂಬಕ್ಕೆ ನೆರವಾಗಿ ಎಂಬ ವರದಿಯನ್ನು ಗಮನಿಸಿ  ಈ ನೆರವನ್ನು ನೀಡಲಾಗಿದೆ ಎಂದು ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಕಜೆ ವೆಂಕಟೇಶ್ವರ ಭಟ್ ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಮೇಜರ್ ಎಂ.ವಿ ಭಟ್, ಕಾರ್ಯದರ್ಶಿ ಶ್ರೀಧರ್ ಹಾಗೂ ಯಶವಂತ ಪಟವರ್ಧನ್, ಅಡೂರು ವೆಂಕಟ್‌ರಾವ್, ವಿಶ್ವಹಿಂದೂ ಪರಿಷತ್‌ನ ನವೀನ್ ನೆರಿಯ, ತಾ| ಗೋರಕ್ಷ ಪ್ರಮುಖ ದಿನೇಶ್, ಬೆಂದ್ರಾಳ ರಾಮಕೃಷ್ಣ ಇರ್ವತ್ತಾಯ, ತೋಟತ್ತಾಡಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಯಾನಂದ ಅಧ್ಯಕ್ಷತೆ ವಹಿಸಿದ್ದರು.  ಅನನ್ಯ ಪ್ರಾರ್ಥಿಸಿ, ಸಮುದಾಯ ದಳದ ಅಧ್ಯಕ್ಷ ಓಬಯ್ಯ ಗೌಡ ಸ್ವಾಗತಿಸಿ, ಪ್ರಾಸ್ತಾವಿಸಿದರು.  ಸುಧೀರ್ ಹೊಸಮಠ ಕಾರ್ಯಕ್ರಮ ನಿರೂಪಿಸಿ, ವಿವಿನೇಶ್ ಚಾರ್ಮಾಡಿ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.