HomePage_Banner_
HomePage_Banner_

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ಜನವಿರೋಧಿ ಮಸೂದೆ ಖಂಡಿಸಿ ವಾಹನ ಜಾಥ ಹಾಗೂ ಬಹಿರಂಗ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟ ಇದರ ಅಶ್ರಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ದಲಿತ ಕಾರ್ಮಿಕ ಹಾಗೂ ಜನವಿರೋಧಿ ಮಸೂದೆ ಹಿಂತೆಗೆಯಲು ಆಗ್ರಹಿಸಿ, ವಾಹನ ಜಾಥ ಹಾಗೂ ಬಹಿರಂಗ ಸಭೆ ನ.20 ರಂದು ಬೆಳ್ತಂಗಡಿ ಮುಖ್ಯ ಬಸ್ಸು ತಂಗುದಾಣದಲ್ಲಿ ಜರುಗಿತು.

ರೈತ ಸಂಘದ ಬೆಳ್ತಂಗಡಿ ತಾಲೂಕು ಮುಖಂಡ ಹರಿದಾಸ್ ಮಾತನಾಡಿ, ಭಾರತ ದೇಶವು ಕೃಷಿ ಆಧಾರಿತ ದೇಶವಾಗಿದೆ. ಭಾರತದಲ್ಲಿ ಸುಮಾರು ಶೇ.೬೬ ಜನರು ನೇರವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನದಂತಹ ಸಂಕಟದ ಸಂದರ್ಭದಲ್ಲಿ ಕೇಂದ್ರ ಹಗೂ ರಾಜ್ಯ ಸರಕಾರದ ಸುಗ್ರೀವಾಜ್ಞೆ ಮೂಲಕ ತಂದಿರುವ ಮಸೂದೆಗಳು ದೇಶಿಯ ರೈತರು, ದಲಿತರು, ಕಾರ್ಮಿಕರು, ಸಾಮಾನ್ಯ ಜನರ ಬದುಕು ಮತ್ತು ಸಂಸ್ಕೃತಿಯ ಮೇಲೆ ಬಲವಾದ ದುಷ್ಪರಿಣಾಮಗಳನ್ನು ಬೀರಲಿದೆ ಹಾಗೂ ದೇಶೀಯ ಸಂಸ್ಥೆ ಕಾರ್ಪೊರೇಟ್ ಕಂಪೆನಿಗಳ ಪಾಲಾಗುವ ಎಲ್ಲಾ ಸಾಧ್ಯತೆಗಳಿವೆ.
ಕಾರ್ಮಿಕ ವಿರೋಧಿ ಮಸೂದೆ, ಕೃಷಿ ವಿರೋಧಿ ಮಸೂದೆಗಳಿಂದಾಗಿ ಭೂ ರಹಿತರಿಗೆ, ದಲಿತರಿಗೆ ಭೂಮಿ ಮತ್ತು ಉದ್ಯೋಗ ನೀಡುವ ಹೆಬ್ಬಾಗಿಲನ್ನು ಮುಚ್ಚಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಕೃಷಿ ಪರಂಪರೆ ಹಾಗೂ ಸಂಪತ್ತನ್ನು ಉಳಿಸಲು ಜಿಲ್ಲೆಯಾದ್ಯಂತ ವಾಹನ ಜಾಥಾ ಹಾಗೂ ಬಹಿರಂಗ ಸಭೆಯನ್ನು ನಡೆಸುವುದಾಗಿ ಹೇಳಿದರು

ರೈತ ಪರ ಹೋರಾಟಗಾರ ರವಿಕಿರಣ್ ಪುಣಚ, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯಾದವ ಶೆಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಕೊಜಂಬೆ, ರೈತ ಸಂಘದ ಜಿಲ್ಲಾ ಮುಖಂಡ ಕೃಷ್ಣಪ್ಪ ಸಾಲ್ಯಾನ್, ರೈತ ಸಂಘದ ನಾಯಕ ಓಸ್ವಾಲ್ಡ್, ಡಿಎಸ್‌ಎಸ್ ಮೈಸೂರು ವಿಭಾಗದ ಮುಖಂಡ ಎಲ್ ಚಂದು, ವಸಂತ ಬಿ.ಕೆ, ನ್ಯಾಯವಾದಿ ಬಿ.ಕೆ ಶಿವಕುಮಾರ್,ಶೇಖರ್ ಎಲ್, ರೈತ ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.