HomePage_Banner_
HomePage_Banner_

ಕುತ್ಲೂರು,: ವೈಲ್ಡ್ ಲೈಫ್ ಕನ್ವರ್ವೇಶನ್ ಸೊಸೈಟಿ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

*

🥦ರೈತರು ದೇಶದ ನಿಜವಾದ ಬೆನ್ನೆಲುಬು🥦*
*ಪ್ರತಾಪಸಿಂಹನಾಯಕ್*

*ವಿಜ್ಞಾನವು ಎಷ್ಟೇ ಮುಂದುವರಿದರು ಆಧುನಿಕತೆಯಲ್ಲಿ ಮನುಷ್ಯನು ಒಂದಲ್ಲ ಒಂದು ಸವಾಲುಗಳನ್ನು ಎದುರಿಸುತ್ತ ಬದುಕುವಂತಾಗಿದೆ.*
*ಪ್ರಸ್ತುತ ಸ್ಥಿತಿಗತಿಯಲ್ಲಿ ಕೋರೋನಾದಂತಹ ಮಹಾಮಾರಿ ರೋಗವನ್ನು ಕೃಷಿಕರು ಗೆದ್ದು ಬದುಕುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ “ಪ್ರತಾಪಸಿಂಹನಾಯಕ್” ಹೇಳಿದರು.*
*ಅವರು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿಗೊಂಡ ಕುಟುಂಬಗಳಿಗೆ ಕುತ್ಲೂರು “ಶ್ರೀ ದೇವಿ ಕೃಪಾ ಕುಕ್ಕುಜೆ ” ಅವರ ಮನೆಯಲ್ಲಿ WCS (ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ) ಪೂರಕವಾದ ಅಡಿಕೆ,ತೆಂಗು,ಗೇರು,ಮಾವು, ಮುಂತಾದ ಸಸಿಗಳನ್ನು ವಿತರಿಸಿ ಮಾತನಾಡಿದರು WCS ಸಂಸ್ಥೆಯಿಂದ ಸಮಾಜಮುಖಿ ಕಾರ್ಯಕ್ರಮವು ಇದಾಗಿದ್ದು ಪಡಕೊಂಡ ಪ್ರತಿಯೊಬ್ಬ ಫಲಾನುಭವಿಗಳು ಇದನ್ನು ಸದುಪಯೋಗ ಪಡೆದುಕೊಂಡು.ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.ವೇದಿಕೆಯಲ್ಲಿ WCS ಹಿರಿಯ ನಿರ್ದೇಶಕರಾದ “ಪಿ.ಎಮ್. ಮುತ್ತಣ್ಣ”ರವರು ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದರು.*
*ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷರಾದ “ಶ್ರೀನಿವಾಸ್ ಇಂದಾಜೆ” ಸಂಸ್ಥೆ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಒಳ್ಳೆಯ ಅಭಿವೃದ್ಧಿ ವ್ಯಕ್ತಪಡಿಸಿದರು.*
*ವೇದಿಕೆಯಲ್ಲಿ ಮಾಜಿ ಅರಣ್ಯ ಸಚಿವರ ನಿವೃತ್ತ ಆಪ್ತ ಕಾರ್ಯದರ್ಶಿಗಳು ಹಿರಿಯರು ಆದ ” ಶಶಿಕಾಂತ ಆರಿಗ”,ನಾರವಿ ಗ್ರಾ.ಪಂ. ಮಾಜಿ ಸದಸ್ಯರಾದ ” ಉದಯಕುಮಾರ್ ಹೆಗ್ಡೆ” ಉಪಸ್ಥಿತರಿದ್ದರು.*
*ಒಟ್ಟು 56 ಫಲಾನುಭವಿಗಳಿಗೆ 5000 ಅಡಿಕೆ,2000 ಗೇರು,200 ತೆಂಗು,75 ಕಸಿ ಮಾವು,75 ಜಾಯಿಕಾಯಿ,500 ಕೊಕ್ಕೋ ಗಿಡವನ್ನು ವಿತರಿಸಿದರು.*
*WCS ಸಂಸ್ಥೆಯ ಕಾರ್ಯಕರ್ತರಾದ “ಕೆ.ರಾಮಚಂದ್ರ ಭಟ್” ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿ ಎಲ್ಲರನ್ನು ಸ್ವಾಗತಿಸಿದರು. “ವಸಂತ ಆಚಾರ್ಯ” ನಾರವಿಯವರು ಧನ್ಯವಾದವಿತ್ತರು.*

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.