ಸ್ಥಳೀಯಾಡಳಿತ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ರದ್ದು ಮಾಡಿದ ಹೈಕೋರ್ಟ್ ; ಚುನಾಯಿತ ಪ್ರತಿನಿಧಿಗಳ ಫಲಿತಾಂಶ ಅಮಾನತಿನಲ್ಲಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಬೆಂಗಳೂರು:
ರಾಜ್ಯದಲ್ಲಿ ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆದು ಎರಡು ವರ್ಷಗಳ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸಿತ್ತು.

ಮತ್ತು ರಾಜ್ಯದ ಹಲವು ಕಡೆಗಳಲ್ಲಿ ಈ ಮೀಸಲಾತಿಗೆ ಅನುಸಾರವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯೂ ನಡೆದಿತ್ತು.

ಆದರೆ, ಇದೀಗ ಸರಕಾರದ ಈ ಮೀಸಲಾತಿ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಮೀಸಲಾತಿಯನ್ವಯ ಅಧಿಕಾರ ವಹಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರಿಗೆ ಶಾಕ್ ನೀಡಿದೆ.

ಹೈಕೋರ್ಟ್ ನ ಏಕಸದಸ್ಯ ಪೀಠ ರಾಜ್ಯ ಸರಕಾರದ ಮೀಸಲಾತಿ ಪಟ್ಟಿಯನ್ನು ರದ್ದುಗೊಳಿಸಿ ಇಂದು ಆದೇಶ ಹೊರಡಿಸಿದೆ. ಮತ್ತು ತನ್ನ ಇಂದಿನ ಈ ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಸರಕಾರಕ್ಕೆ ಹತ್ತು ದಿನಗಳ ಕಾಲಾವಕಾಶವನ್ನು ನೀಡಿದೆ.

ರಾಜ್ಯ ಸರಕಾರವು ಕಳೆದ ಅಕ್ಟೋಬರ್ 8ರಂದು ರಾಜ್ಯದ ಒಟ್ಟು 277 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸಿ ಆದೇಶ ಹೊರಡಿಸಿತ್ತು.

ಹೈಕೋರ್ಟಿನ ಇಂದಿನ ಈ ಆದೇಶದಿಂದ ಈಗಾಗಲೇ ಅಧಿಕಾರ ಸ್ವೀಕರಿಸಿರುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಫಲಿತಾಂಶಗಳು ಮುಂದಿನ ಆದೇಶದವರೆಗೆ ಅಮಾನತು ಸ್ಥಿತಿಯಲ್ಲಿರುತ್ತವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.