HomePage_Banner_
HomePage_Banner_

ಲೈಂಗಿಕ ದೌರ್ಜನ್ಯ ಆರೋಪ: ಚಾಮರಾಜಪೇಟೆ ಎಸ್.ಐ ಅಮಾನತು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಲ್ಯಾಪ್‌ಟಾಪ್ ಕಳವು ಪ್ರಕರಣವೊಂದರ ಬೆಳವಣಿಗೆಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಚಾಮರಾಜ ಪೇಟೆ ಠಾಣೆಯ ಎಸ್.ಐ ಹಾಗೂ ಅದೇ ಊರಿನ ಮಹಿಳೆಯೋರ್ವರು ಪರಸ್ಪರ ವಂಚನೆ ಆರೋಪ ಹೊರಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ ಹಾಗೂ ಇದರ ಬಗ್ಗೆ ನಡೆದ ಇಲಾಖಾ ತನಿಖೆ ವರದಿ ಆಧಾರದಲ್ಲಿ ಎಸ್.ಐಯವರು ಅಮಾನತುಗೊಂಡ ಘಟನೆ  ವರದಿಯಾಗಿದೆ.
ಚಾಮರಾಜ ಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಶ್ವನಾಥ ಬಿರಾದಾರ್ ಅವರ ವಿರುದ್ಧ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ದ.ಕ ಜಿಲ್ಲಾ ಎಸ್.ಪಿ ಲಕ್ಷ್ಮೀಪ್ರಸಾದ್ ಅವರು ತನಿಖೆ ನಡೆಸಿ ನೀಡಿದ ವರದಿ ಆಧಾರದಲ್ಲಿ ಇದೀಗ ಪೊಲೀಸ್ ಇಲಾಖೆ ವಿಶ್ವನಾಥ ಬಿರದಾರ್ ಅವರನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ.
ಪ್ರಕರಣದ ಹಿನ್ನೆಲೆ: ಲ್ಯಾಪ್‌ಟಾಪ್ ಕಳವು ಪ್ರಕರಣದಲ್ಲಿ ಚಾಮರಾಜ ಪೇಟೆಯ ಮಹಿಳೆಯೋರ್ವರು ಚಾಮರಾಜ ಪೇಟೆ ಠಾಣೆಗೆ ದೂರು ನೀಡಲು ಬಂದಿದ್ದು, ಅಲ್ಲಿಯ ಎಸ್.ಐ ಆಗಿರುವ ವಿಶ್ವನಾಥ ಬಿರಾದಾರ್ ಅವರು ಪರಸ್ಪರ ಪರಿಚಿತರಾಗಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಎಸ್.ಐ ಹಾಗೂ ಮಹಿಳೆ ನ.೯ ರಂದು ಧರ್ಮಸ್ಥಳಕ್ಕೆ ಬಂದು ತಂಗಿದ್ದು, ನ.11 ರಂದು ಧರ್ಮಸ್ಥಳ ಠಾಣೆಗೆ ಬಂದು ಪರಸ್ಪರ ಆರೋಪ ಹೊರಿಸಿ ದೂರು ನೀಡಿದ್ದರು.
ಮಹಿಳೆ ನೀಡಿದ ದೂರಿನಲ್ಲಿ ಲ್ಯಾಪ್ ಟಾಪ್ ಕಳವು ಪ್ರಕರಣದ ನಂತರ ಎಸ್.ಐ ವಿಶ್ವನಾಥ ಬಿರದಾರ್‌ರವರು ತನ್ನ ಇರುವಿಕೆಯ ಬಗ್ಗೆ ತಿಳಿದು ಕೊಳ್ಳಲು ಮೊಬೈಲ್‌ಗೆ ಕರೆ ಮಾಡಿ ಮಾತನಾಡುವುದು, ನಾನು ನಿನ್ನನ್ನು ಪ್ರಿತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಧರ್ಮಸ್ಥಳಕ್ಕೆ ಕರೆದುಕೊಂಡು ಬಂದು, ಲೈಂಗಿಕ ದೌರ್ಜನ್ಯ ನಡೆಸಿ ಮದುವೆಯಾಗದೆ ಮೋಸ ಮಾಡಿರುವುದಾಗಿ ಆರೋಪಿಸಿದ್ದರು.
ಎಸ್.ಐ ಬಿರಾದಾರ್ ಪ್ರತಿ ದೂರು ನೀಡಿ ಸದ್ರಿ ಮಹಿಳೆ ನನ್ನ ನಂಬರ್ ಪಡೆದುಕೊಂಡು ಬಳಿಕ ನಿರಂತರ ಕರೆ ಮಾಡುತ್ತಾ, ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದು, ಮದುವೆಯಾಗುವಂತೆಯೂ ದಂಬಾಲು ಬಿದ್ದಿದ್ದಳು. ರೂ. 10 ಲಕ್ಷ ಬೇಡಿಕೆ ಇಟ್ಟು ಕಮಿಷನರ್‌ಗೆ ದೂರು ನೀಡುವುದಾಗಿ ಬೆದರಿಸಿ, ಇಲ್ಲದಿದ್ದರೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಳು. ಇದರಿಂದ ಮರ್ಯಾದೆಗೆ ಅಂಜಿ ಆಕೆಯ ಜೊತೆ ಧರ್ಮಸ್ಥಳಕ್ಕೆ ಬಂದಿರುವುದಾಗಿ ತಿಳಿಸಿದ್ದರು. ಎರಡೂ ಕಡೆಯವರ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನ.11ರಂದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.