HomePage_Banner_
HomePage_Banner_

ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತದ ಸಾಮಾನ್ಯ ಸಭೆಯು ನ.19 ರಂದು ಪ.ಪಂ ಸಭಾಭವನದಲ್ಲಿ ಜರುಗಿತು.
ಪ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ, ವೇಣುಗೋಪಾಲ ಶರ್ಮಾ ಮತ್ತು ನ.ಪಂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಹಿಂದಿನ ಸಭೆಯ ನಿರ್ಣಯಗಳನ್ನು ಪರಿಶೀಲಿಸಿ ಮಂಜೂರುಗೊಳಿಸಲಾಯಿತು. ಕಳೆದ ತಿಂಗಳ ಜಮಾ-ಖರ್ಚು ವಿವರ, ವಿವಿಧ ಕಾಮಗಾರಿ\ ಖರೀದಿ ಬಗ್ಗೆ ಕರೆಯಲಾದ ಟೆಂಡರ್\ ಕೊಟೇಷನ್‌ಗಳನ್ನು ಪರಿಶೀಲಿಸಿ ಅಂಗೀಕರಿಸಲಾಯಿತು.
ಪ.ಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತ\ ವಸತಿ ರಹಿತ ಫಲಾನುಭವಿಗಳ ವಾರ್ಡುವಾರು ಪಟ್ಟಿ ಪರಿಶೀಲನೆ, 2021-22ನೇ ಸಾಲಿಗೆ ಅಗತ್ಯವಿರುವ ಕಛೇರಿ ವಿಭಾಗ, ನೀರು ಸರಬರಾಜು ವಿಭಾಗ, ನೈರ್ಮಲ್ಯ ವಿಭಾಗಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ಪಡೆಯಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವ ಕುರಿತು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಐಇಸಿ ಚಟುವಟಿಕೆಗಳಿಗೆ ಬಿಡುಗಡೆಯಾಗಲಿರುವ ರೂ.೨.೫೦ ಲಕ್ಷ ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.