ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಲೆನ್ಸಿ ಪಿಂಟೊ, ಉಪಾಧ್ಯಕ್ಷರಾಗಿ ಹೆನ್ರಿ ಮೋರಾಸ್ ಅವಿರೋಧ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕಳೆದ 5 ವರ್ಷವನ್ನು ಪೂರೈಸಿ ಕಳೆದ ಮಾರ್ಚ್‌ಗೆ ಅವಧಿ ಮುಗಿದಿದ್ದು ಕೊರೊನಾ ಕೋವೀಡ್ -19 ರಿಂದ ಚುನಾವಣೆ ಬಾಕಿಯಾಗಿತ್ತು
ನ.15ಕ್ಕೆ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕಿತ್ತು. ನ.8 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದರಿಂದ 11ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ನೂತನ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯು ನ.18 ರಂದು ನಡೆದು ಅಧ್ಯಕ್ಷರಾಗಿ ಲೆನ್ಸಿ ಪಿಂಟೊ ಮುಂದಿನ 5ವರ್ಷಗಳ ಅವಧಿಗೆ ಪುನಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಗ್ರೆಗರಿ ಸೇರಾ ಮತ್ತು ಹೆನ್ರಿ ಮೋರಾಸ್‌ರವರು ನಾಮಪತ್ರ ಸಲ್ಲಿಸಿ ಚುನಾವಣೆ ನಡೆದು ಹೆನ್ರಿ ಮೋರಾಸ್ ವಿಜೇತರಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಗ್ರೆಗರಿ ಸೇರಾ, ಜೋಯಲ್ ಮೆಂಡೋನ್ಸಾ, ರೋನಾಲ್ಡ್ ಸಿಕ್ವೇರಾ, ಲಿಯೋ ರೊಡ್ರಿಗಸ್, ವಿವೇಕ್ ವಿನ್ಸೆಂಟ್ ಪಾಯ್ಸ್, ಸಿರಿಲ್ ಸಿಕ್ವೇರಾ, ಹ್ಯೂಬರ್ಟ್ ಲೋಬೊ, ಗ್ರೇಸಿ ರೀಟಾ ರೆಬೆಲ್ಲೊ, ಸೆಲೆಸ್ತಿನ್ ಡಿಸೋಜ ಇವರು ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಸುಕಾನ್ಯರವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.