HomePage_Banner_
HomePage_Banner_

ರಾತ್ರಿ ಮಿಂಚು ಹುಳುದಂತೆ ಬೆಳಕು ಚೆಲ್ಲಿದ ಬಂಗುಡೆ ಮೀನು: ನಾಳದಲ್ಲಿ ವಿಸ್ಮಯಕಾರಿ ಘಟನೆ

ನಾಳ: ಇಲ್ಲಿಯ ತಿಮ್ಮನೊಟ್ಟು ನಿವಾಸಿ ಶ್ರೀಧರ ರವರು ಗೇರುಕಟ್ಟೆ ಮೀನಿನ ಅಂಗಡಿಯಿಂದ ಖರೀದಿಸಿದ ಬಂಗುಡೆ ಮೀನುಗಳನ್ನು ಶುದ್ದೀಕರಿಸುವ ಸಂದರ್ಭ ಮೀನುಗಳು ಹೊಳೆಯುತ್ತಿರುವುದು ನ.17 ರಂದು ರಾತ್ರಿ ಕಂಡು ಬಂದಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶ್ರೀಧರ ರವರು ತಮ್ಮ ಮನೆಮಂದಿ ಸವಿಯಲೆಂದು ಗೇರುಕಟ್ಟೆ ಮೀನು ವ್ಯಾಪಾರಿಯಿಂದ ರೂ.100 ವೆಚ್ಚದ ಹತ್ತು ಬಂಗುಡೆ ಮೀನು ತಂದಿದ್ದರು. ರಾತ್ರಿ ವೇಳೆಯಲ್ಲಿ ಮೀನುಗಳನ್ನು ಸ್ವಚ್ಛಗೊಳಿಸುವ ಸಂದರ್ಭ ಕೈಗಳಲ್ಲಿ ಬಿಳಿ ಬಣ್ಣದ ಬೆಳಕು ಚೆಲ್ಲುವ ದೃಶ್ಯ ಮನೆಯವರಲ್ಲಿ ಬೆರಗು ಮೂಡಿಸಿದೆ ಹಾಗೂ ಮೀನು ಸಂಪೂರ್ಣ ಕೆಟ್ಟು ಹೋಗಿದ್ದು, ಪದಾರ್ಥಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಇರುವುದನ್ನು ಕಂಡ ಮನೆಯವರು ಕೂಡಲೇ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಿಗೆ ವಿಷಯ ತಿಳಿಸಿದ್ದಾರೆ.


ಈ ವಿಚಾರವನ್ನು ಬೆಳ್ತಂಗಡಿ ವೈದ್ಯಾಧಿಕಾರಿಗಳಿಗೆ ಮತ್ತು ಸ್ಥಳೀಯ ಆಶಾ ಕಾರ್ಯಕರ್ತೆಯವರ ಗಮನಕ್ಕೆ ತಂದಿದ್ದು, ಅವರು ನ.೧೮ರಂದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡುವುದಾಗಿ ಹೇಳಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೀನುಗಳು ಕೆಡದಂತೆ ಹಾಕಲಾಗುವ ರಾಸಾಯನಿಕ ವಸ್ತುಗಳು ಜಾಸ್ತಿಯಾಗಿ ಈ ರೀತಿ ಬೆಳಕು ಬಂದಿರಬಹುದು ಎಂದು ಸ್ಥಳೀಯರ ಅಭಿಪ್ರಾಯಪಡುತ್ತಾರೆ.
ಗೇರುಕಟ್ಟೆಗೆ ಕಳಪೆ ಗುಣಮಟ್ಟದ, ಪದಾರ್ಥಕ್ಕೆ ಉಪಯುಕ್ತವಲ್ಲದ ಮೀನು ತರುತ್ತಿರುವುದು ಹಾಗೂ ದುಬಾರಿ ಬೆಲೆಗೆ ಮೀನು ಮಾರಾಟ ಮಾಡುವುದರ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾದಂತಹ ಮಹಾಮಾರಿ ಎಲ್ಲೆಡೆ ಹಬ್ಬಿರುವಾಗ ಇಂತಹ ಕಳಪೆ ಗುಣಮಟ್ಟದ ಮೀನು ಪದಾರ್ಥಗಳನ್ನು ತಿಂದ ಮನೆಯ ಸಣ್ಣ ಪುಟ್ಟ ಮಕ್ಕಳಿಗೆ ಬೇರೆ ರೀತಿಯ ಕಾಯಿಲೆ ಸೃಷ್ಟಿ ಆಗುವುದಕ್ಕೆ ಸಂಶಯವಿಲ್ಲ. ಆದುದರಿಂದ ಕಳಿಯ ಗ್ರಾಮ ಪಂಚಾಯತು ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಂಡು ಬಡವರ ಜೀವ ಉಳಿಸಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.