ಮಾಯ ಮಹಾದೇವ ಭಜನಾ ಮಂಡಳಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಕಬಡ್ಡಿ ಪಂದ್ಯಾಟ

ಬೆಳಾಲು: ಇಲ್ಲಿನ ಶ್ರೀ ಮಾಯಾ ಮಹಾದೇವ ಭಜನಾ ಮಂಡಳಿ ಮಾಯಾ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 39ನೇ ವರ್ಷದ ಕ್ರೀಡಾ ಕೂಟದ ಅಂಗವಾಗಿ ಕೋವಿಡ್19ನಿಮಿತ್ತ ಸಾಂಕೇತಿಕವಾಗಿ ಸ್ಥಳೀಯರಿಗೆ ಕಬಡ್ಡಿ ಪಂದ್ಯಾಟ ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ನ.16 ರಂದು ಜರುಗಿತು. ದೇವಸ್ಥಾನದ ಅರ್ಚಕ ಕೇಶವ ರಾಮಯಾಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗ ಜಗ್ಗಾಟ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ ವಹಿಸಿದ್ದರು. ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಬೆಳಾಲು ಅರಣ್ಯ ಪಾಲಕ ಲೋಕೇಶ್, ಜೇಸಿ 15ರ ವಲಯಾಧಿಕಾರಿ ಶಿವಕುಮಾರ್ ಬಾರಿತ್ತಾಯ ಪಾರಳ, ಉಜಿರೆ ಶ್ರೀ ಧ.ಮ. ನ್ಯಾಚುರೋಪತಿ ಕಾಲೇಜಿನ ದೈಹಿಕ ಶಿಕ್ಷಣಶಿಕ್ಷಕ ಧರ್ಮೇಂದ್ರ ಕುಮಾರ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ದೀನೇಶ ಎಂ.ಕೆ., ಭಜನಾ ಮಂಡಳಿಯ ಗೌರವಾಧ್ಯಕ್ಷ ವಸಂತ ಎಂ.ಕೆ.,ಮಾಜಿ ಅಧ್ಯಕ್ಷ ರುಗಳಾದ ಮೋಹನ ಪೂಜಾರಿ, ಕುಂಭ ಗೌಡ, ಗಂಗಾಧರ ಸಾಲಿಯಾನ್,ಕಾರ್ಯದರ್ಶಿ ಹರೀಶ್ ಆಚಾರ್ಯ ಕುದ್ರಾಲು, ಉಪಾಧ್ಯಕ್ಷ ಬಾಲಚಂದ್ರ ಆಚಾರ್ಯ, ಕೋಶಾಧಿಕಾರಿ ತೇಜಾಕ್ಷ, ಕ್ರೀಡಾ ಸಂಚಾಲಕ ಯತಿರಾಜ, ತೀರ್ಪುಗಾರ ಸುಂದರ ಎಂ.ಕೆ.,ಪದಾಧಿಕಾರಿಗಳಾದ ನಾರಾಯಣ ಮಡಿವಾಳ, ರೋಹಿತಾಕ್ಷ ಆಚಾರ್ಯ, ಸುರೇಶ ಗೌಡ ಅಂಗಡಿ ಬೆಟ್ಟು,ಸುರೇಶ ಬರಮೇಲು, ಭಜನಾ ಮಂಡಳಿಯ ಸದಸ್ಯರು, ಊರವರು, ಕ್ರೀಡಾಲು ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಶಿವಕೀರ್ತಿ ಸ್ವಾಗತಿಸಿ, ಸುರೇಂದ್ರ ಗೌಡ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.