ಮಾಯಾ ಮಹಾದೇವ ದೇವಸ್ಥಾನಕ್ಕೆ ‘ಮಹಾಪ್ರಸಾದ’ ನೆನಪಿನ ಆಲ್ಬಂ ಹಸ್ತಾಂತರ

ಬೆಳಾಲು: ಇಲ್ಲಿಯ ಮಾಯಾ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಗಳು, ಸಭೆ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಗ್ರ ವಿವರಗಳು ಹಾಗೂ ಸಚಿತ್ರ ಪತ್ರಿಕಾ ವರದಿಗಳ ಆಲ್ಬಂ “ಮಹಾಪ್ರಸಾದ”ದ ಹಸ್ತಾಂತರ  ಕಾರ್ಯಕ್ರಮ   ಶ್ರೀ ಮಾಯಾ ಮಹಾದೇವ ದೇವಸ್ಥಾನದಲ್ಲಿ ಜರಗಿತು.
ಆಲ್ಬಂ ತಯಾರಿಸಿದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿಯವರು ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದ ಎಚ್.ಪದ್ಮ ಗೌಡರವರ ಮೂಲಕ ಆಲ್ಬಂನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಮೋಹನ ಬಂಗೇರ, ಆನುವಂಶಿಕ ಮೊಕ್ತೇಸರರಾದ ಮಾಯಾಗುತ್ತು ಮನೆಯ ಪುಷ್ಪದಂತ ಜೈನ್, ದಿನೇಶ್ ಎಂ.ಕೆ, ಅಸ್ರಣ್ಣ ಶಿವಕುಮಾರ್ ಬಾರಿತ್ತಾಯ ಪಾರಳ, ಬೆಳಾಲು ಗ್ರಾ.ಪಂ. ಮಾಜಿ ಸದಸ್ಯ ಪೆರಣ ಗೌಡ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶೇಖರ ಗೌಡ ಕೊಲ್ಲಿಮಾರು, ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಶಿಕ್ಷಕ ಮಹೇಶ್ ಪುಳಿತ್ತಡಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.