HomePage_Banner_
HomePage_Banner_

ಬಳಂಜ: ಸುವರ್ಣ ಸ್ಟೈಕರ್ಸ್ ತಂಡದಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಳಂಜ: ಸುವರ್ಣ ಸ್ಟೈಕರ್ಸ್ ವತಿಯಿಂದ ಬಳಂಜ ವಾಲಿಬಾಲ್ ಕ್ಲಬ್ ಆಶ್ರಯದಲ್ಲಿ ಸೀಸನ್ 3 ಇದರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಸುವರ್ಣ ಟ್ರೋಫಿ 2020 ಶ್ರೀ ದೈವ ಕೊಡಮಣಿತ್ತಾಯ ಆವರಣ ಬಳಂಜದಲ್ಲಿ  ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು ನೇರವೇರಿಸಿ ಶುಭ ಹಾರೈಸಿದರು.

ಪ್ರಗತಿಪರ ಕೃಷಿಕ ಹೆಚ್ ದೇಜಪ್ಪ ಪೂಜಾರಿ ಸುಧಾಮ ಕ್ರೀಡಾಂಗಣದ ಉದ್ಘಾಟನೆಯನ್ನು ನೇರವೇರಿಸಿ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣ ಸ್ಟೈಕರ್ಸ್ ತಂಡದ ಮಾಲಕ ರಂಜಿತ್ ಹೆಚ್.ಡಿ ಸುಧಾಮ ವಹಿಸಿದ್ದರು.
ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್ ಎಸ್, ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ, ತಂಡದ ಮಾಲಕರಾದ ವಿಶ್ವನಾಥ ಹೊಳ್ಳ, ಸಂತೋಷ್ ಪಿ ಕೋಟ್ಯಾನ್ ಬಳಂಜ, ಸಚಿನ್ ಶೆಟ್ಟಿ ಕುರೆಲ್ಯ,ತಂಡದ ವ್ಯವಸ್ಥಾಪಕ ಯಶೋಧರ ಶೆಟ್ಟಿ ಬಳಂಜ, ಕಾರ್ಯದರ್ಶಿ ಯೋಗೀಶ್ ಆರ್ ಉಪಸ್ಥಿತರಿದ್ದರು.
ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ವಾಲಿಬಾಲ್ ಕ್ಲಬ್ ನ ಸದಸ್ಯ ರಾಜಿತ್ ರೈ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ರಂಜಿತ್ ಹೆಚ್.ಡಿ ಸುಧಾಮ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಜಗದೀಶ್ ಬಳಂಜ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸುವರ್ಣ ಸ್ಟೈಕರ್ಸ್ ತಂಡದ ಮ್ಯಾನೇಜರ್ ಆಗಿ ಜವಾಬ್ದಾರಿ ನಿರ್ವಹಿಸಿದ ರಂಜಿತ್ ಬಿರ್ವ ಹಾಗೂ ನಿರ್ವಹಿಸುತ್ತಿರುವ ಪ್ರವೀಣ್ ಪೂಜಾರಿ ಲಾಂತ್ಯಾರು ಅವರನ್ನು ಗೌರವಿಸಲಾಯಿತು.

ಪಂದ್ಯಾಟದಲ್ಲಿ ಪ್ರಥಮ ಸುವರ್ಣ ಸ್ಟೈಕರ್ಸ್, ದ್ವೀತಿಯ ದಿಮಿಸೋಲೆ, ತೃತೀಯ ಮಜ್ಜೇನಿಬೈಲು ಬ್ರದರ್ಸ್, ಚತುರ್ಥ ಕೋಟ್ಯಾನ್ ರಾಕರ್ಸ್ ವಿಜೇತರಾಗಿ ಪ್ರಶಸ್ತಿ ಪಡೆದರು. ಉತ್ತಮ ಹೊಡೆತಗಾರರಾಗಿ ಸುರೇಶ್ ಹೇವ, ಆಲ್ ರೌಂಡರ್ ಆಗಿ ಸುಭಾಶ್ ಹೇವ, ಉತ್ತಮ‌ ಪಾಸರ್ ಆಗಿ ಅಶ್ವಥ್ ಹೆಚ್.ಡಿ ಸುಧಾಮ ವೈಯಕ್ತಿಕ ಪ್ರಶಸ್ತಿ ಪಡೆದರು.ನಿಸಾರ್,ಯಶ್ ಹಾಗೂ ಪ್ರಮೋದ್ ವೀಕ್ಷಕ ವಿವರಣೆಯನ್ನು ಮಾಡಿದರು. ತಿರ್ಪುಗಾರರಾಗಿ ಕೇವನ್ ಹಾಗೂ ಪ್ರವೀಣ್ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.