HomePage_Banner_
HomePage_Banner_

ಗೇರುಕಟ್ಟೆ: ನೆಹರು ರವರ 131ನೇ ಜನ್ಮದಿನಾಚರಣೆ

ಎರುಕಡಪ್ಪು ಅಂಗನವಾಡಿಯಲ್ಲಿ ನೆಹರು ರವರ 131ನೇ ಜನ್ಮದಿನ ದಿನಾಚರಣೆ

 

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಜವಾಹರಲಾಲ್ ನೆಹರು ಅವರ 131ನೇ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆಯು ನ.14 ರಂದು ನಡೆಯಿತು.

 


ಅಂಗನವಾಡಿ ಕೇಂದ್ರ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಭಾರತೀ ಬೇಬಿ ಗೌಡ ದೀಪ ಪ್ರಜ್ವಲಿಸಿದರು.ಹಾಗೂ ಅಧ್ಯಕ್ಷತೆ ವಹಿಸಿದರು.ಬೆಳ್ತಂಗಡಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುರುವಾಯನಕೆರೆ ವಲಯ ಮೇಲ್ವಿಚಾರಕಿ ಯಶೋಧ ಹಾಗೂ ಉರುವಾಲು ಪದವು ಶ್ರೀ ಭಾರತೀ ಅಂಗ್ಲ ಮಾದ್ಯಮ ಶಾಲಾ ವಿಜ್ಞಾನ ಸಹ ಶಿಕ್ಷಕಿ ರೇಖಾ ರಾಘವೇಂದ್ರ,ಕಳಿಯ ಗ್ರಾಮದ ಆಶಾ ಕಾರ್ಯಕರ್ತೆ ಸುಭಾಷಿಣಿ ಜನಾರ್ದನ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಎರುಕಡಪ್ಪುಅಂಗನವಾಡಿ ಬಾಲವಿಕಾಸ ಸಮಿತಿ ಮತ್ತು ಮಕ್ಕಳ ಪೋಷಕರು ಸಂಯುಕ್ತ ಆಶ್ರಯದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಕಳಿಯ ಪಂಚಾಯತು ಮಾಜಿ ಸದಸ್ಯೆ ಮೋಹಿನಿ,ಅಂಗನವಾಡಿ ಸಹಾಯಕಿ ವಾರಿಜ,ಸ್ಥಳೀಯ ರಾದ ಶ್ವೇತಾ ಮ್ಯಾಥ್ಯೂ, ಕೃಪಾ, ಜೈನಾಬಿ,ಫಾತಿಮ,ಮೈಮುನಾ,ಮಿಸ್ರೀಯಾ,ಜುಬೈದ, ಅಲಿಮಮ್ಮ,ಅಪ್ಸಭಾನು,ಲತಾಲಕ್ಷಿ, ಸ್ರೀಶಕ್ತಿ ಕೇಂದ್ರದ ಪದಾಧಿಕಾರಿಗಳು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದು ಸಹಕರಿಸಿದರು.ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಆಶಾ ಕಾರ್ಯಕರ್ತೆ ಸುಭಾಷಿಣಿ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.