ಬಿ.ಜೆ.ಪಿ. ಯುವ ಮೋರ್ಚಾ: ಬೆಳ್ತಂಗಡಿಯಲ್ಲಿ ಸಾವಿರ ಹಣತೆಗಳ ಬೆಳಕಿನ ವೈಭವ, ಗೋಪೂಜೆ ಸಂಪನ್ನ


ಬೆಳ್ತಂಗಡಿ:
ದೀಪಗಳ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಬಿ.ಜೆ.ಪಿ. ಯುವಮೋರ್ಚಾ ಬೆಳ್ತಂಗಡಿ ಘಟಕದ ವತಿಯಿಂದ ಶನಿವಾರ ದಿನಪೂರ್ತಿ ಕಾರ್ಯಕ್ರಮಗಳು ನಡೆದವು.

ದೀಪಾವಳಿ ಆಚರಣೆಯಲ್ಲಿ ತುಳುನಾಡಿನ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿರುವ ಉದ್ದಿನ ದೋಸೆಯನ್ನು ಇಂದಿನ ಜನಾಂಗಕ್ಕೆ ಇನ್ನಷ್ಟು ಪ್ರಚುರಪಡಿಸುವ ಉದ್ದೇಶದಿಂದ ‘ದೀಪಾವಳಿ ದೋಸೆ ಹಬ್ಬ’ ನಗರದ ಬಸ್ ನಿಲ್ದಾಣ ಭಾಗದಲ್ಲಿ ನಡೆಯಿತು.

ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕ ಹರೀಶ್ ಪೂಂಜ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮಕ್ಕೆ ಶನಿವಾರ ಬೆಳಿಗ್ಗೆ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳಿಗ್ಗಿನಿಂದ ಸಾಯಂಕಾಲದವರೆಗೆ ನಡೆದ ಉಚಿತ ದೋಸೆ ವಿತರಣೆಯ ಸವಿಯನ್ನು ಸಾವಿರಾರು ಜನರು ಸವಿದು ಸಂಭ್ರಮಿಸಿದರು.

ಈ ದಿಪಾವಳಿ ದೋಸೆ ಹಬ್ಬದಲ್ಲಿ ಸುಮಾರು 2 ಕ್ವಿಂಟಾಲ್ ಅಕ್ಕಿ ಬಳಸಿ 9000 ದೋಸೆಯನ್ನು ಬೆಳ್ತಂಗಡಿ ಪರಿಸರದ ಜನತೆ ಸವಿದಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಅವರು ಸಮಾರೋಪ ಸಮಾರಂಭದಲ್ಲಿ ಮಾಹಿತಿ ನೀಡಿದರು.

ಬಿಜೆಪಿ ಯುವ ಮೋರ್ಚಾದಿಂದ ಬೆಳ್ತಂಗಡಿಯಲ್ಲಿ ದೀಪಾವಳಿ ದೋಸೆ ಹಬ್ಬ


ಬಳಿಕ ಗೋಧೂಳಿ ಸಂದರ್ಭದಲ್ಲಿ ಸಾವಿರ ಹಣತೆಗಳನ್ನು ಬೆಳಗಿ ದೀಪಾರಾಧನೆ ನಡೆಸಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಗೋ ಪೂಜೆಯ ಸಂಪ್ರದಾಯವೂ ಸಹ ಶಾಸಕರ ಉಪಸ್ಥಿತಿಯಲ್ಲಿ ನೆರವೇರಿತು. ದೀಪಾರಾಧನೆ ಮತ್ತು ಗೋಪೂಜೆಗೂ ಮುನ್ನ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು.

ಒಟ್ಟಿನಲ್ಲಿ ಬೆಳ್ತಂಗಡಿ ಪರಿಸರದಲ್ಲಿ ಬಿಜೆಪಿ ಯುವಮೋರ್ಚಾದ ಉತ್ಸಾಹಿ ಕಾರ್ಯಕರ್ತರ ಭಾಗೀದಾರಿಕೆಯಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮ ದೀಪಾವಳಿ ಸಂಭ್ರಮಕ್ಕೆ ಇನ್ನಷ್ಟು ಮೆರುಗು ತುಂಬಿತು.


ಈ ಸಂದರ್ಭದಲ್ಲಿ, ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ನಾಯಕ್, ಶಾಸಕ ಹರೀಶ್ ಪೂಂಜ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ತ ಕಾಮತ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವಾ, ಉಪಾಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಸುಬ್ರಮಣ್ಯ ಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯುವರಾಜ್ ಜೈನ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಸುಧಾಕರ್ ಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಯತೀಶ್ ಶೆಟ್ಟಿ, ಮಹಿಳಾ ಬಿಜೆಪಿ ಯುಮೋರ್ಚಾ ಅಧ್ಯಕ್ಷರಾದ ವಿಜಯ ಆರಂಬೋಡಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಅಭಿಲಾಷ್ ಶೆಟ್ಟಿ, ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ಯಶವಂತ ಗೌಡ, ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಉಮೇಶ್ ಕುಲಾಲ್, ತಾಲೂಕು ಯುವ ಮೋರ್ಚಾ ವಿನೀತ್ ಕೋಟ್ಯಾನ್, ಪರಿಶಿಷ್ಟ ಪಂಗಡದ ಯುವ ಮೋರ್ಚಾ ಅಧ್ಯಕ್ಷ  ಚೆನ್ನಕೇಶವ ಹಾಗೂ  ಪಕ್ಷದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.