HomePage_Banner_
HomePage_Banner_

ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಕಾರ್ಯದರ್ಶಿ ಆರತಿ ಹೆಬ್ಬಾರ್ ನಿಧನ

ಬೆಳ್ತಂಗಡಿ: ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪ್ರಸ್ತುತ ಕಾರ್ಯದರ್ಶಿ ಆರತಿ ಹೆಬ್ಬಾರ್ ಸಿರಿಬೈಲು ( 55ವ.) ಇವರು ಅಲ್ಪ ಕಾಲದ‌ ಅಸೌಖ್ಯದಿಂದ ನ.14 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‌.

ಮೂಲತಃ ಕೊಪ್ಪ‌ ನಿವಾಸಿನಿಯಾಗಿರುವ ಆರತಿ ಹೆಬ್ಬಾರ್ ಅವರು ಕಡಿರುದ್ಯಾವರ ಗ್ರಾಮದ ಸಿರಿಬೈಲು ನಿವಾಸಿ ಕೃಷಿಕ ರಂಗನಾಥ ಹೆಬ್ಬಾರ್ ಅವರ ಧರ್ಮಪತ್ನಿಯಾಗಿದ್ದಾರೆ. ಪ್ರಸ್ತುತ ಮುಂಡಾಜೆಯಲ್ಲಿ‌ ಮನೆಮಾಡಿ ನೆಲೆಸಿದ್ದರು.

ಅತ್ಯುತ್ತಮ ಸಂಘಟಕಿಯಾಗಿದ್ದ ಅವರು ಕಡಿರುದ್ಯಾವರದ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲದ ಕ್ರಿಯಾಶೀಲ ಸದಸ್ಯರಾಗಿ, ಪ್ರಸ್ತುತ ಕೋಶಾಧಿಕಾರಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಸ್ರ್ತೀ ಶಕ್ತಿ ಬ್ಲಾಕ್ ಸೊಸೈಟಿಯ ಮಾಜಿ ಅಧ್ಯಕ್ಷರಾಗಿ, ಹಿಂದೆ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಾಜಿ ಅಧ್ಯಕ್ಷರಾಗಿ, ಬ್ಲಾಕ್ ಮಹಿಳಾ ಕಾಂಗ್ರೆಸ್‌ ಸಕ್ರೀಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತಿ ರಂಗನಾಥ ಹೆಬ್ಬಾರ್, ಏಕೈಕ ಪುತ್ರ ಸಚಿನ್ ಹೆಬ್ಬಾರ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ವಿಧಿ ಉಜಿರೆ ಮೋಕ್ಷಧಾಮ ರುದ್ರಭೂಮಿಯಲ್ಲಿ ಇಂದು ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲದವರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.