ಎರುಕಡಪ್ಪು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಗೇರುಕಟ್ಟೆ : ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎರುಕಡಪ್ಪುಅಂಗನವಾಡಿ ಬಾಲವಿಕಾಸ ಸಮಿತಿ ಮತ್ತು ಮಕ್ಕಳ ಪೋಷಕರ ಸಂಯುಕ್ತ ಆಶ್ರಯದಲ್ಲಿ  ಜವಾಹರಲಾಲ್ ನೆಹರು ಅವರ 131ನೇ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆ ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ನ.14 ರಂದು ನಡೆಯಿತು.

ಅಂಗನವಾಡಿ ಕೇಂದ್ರ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಭಾರತಿ ಬೇಬಿ ಗೌಡ ದೀಪ ಪ್ರಜ್ವಲಿಸಿದರು. ಬೆಳ್ತಂಗಡಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುರುವಾಯನಕೆರೆ ವಲಯ ಮೇಲ್ವಿಚಾರಕಿ ಯಶೋಧ ಹಾಗೂ ಉರುವಾಲು ಪದವು ಶ್ರೀ ಭಾರತಿ ಅಂಗ್ಲ ಮಾದ್ಯಮ ಶಾಲಾ ವಿಜ್ಞಾನ ಸಹ ಶಿಕ್ಷಕಿ ರೇಖಾ ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಳಿಯ ಗ್ರಾ.ಪಂ ಮಾಜಿ ಸದಸ್ಯೆ ಮೋಹಿನಿ, ಅಂಗನವಾಡಿ ಸಹಾಯಕಿ ವಾರಿಜ, ಸ್ಥಳೀಯರಾದ ಶ್ವೇತಾ ಮ್ಯಾಥ್ಯೂ, ಕೃಪಾ, ಜೈನಾಬಿ, ಫಾತಿಮ, ಮೈಮುನಾ, ಮಿಸ್ರೀಯಾ, ಜುಬೈದ, ಅಲಿಮಮ್ಮ, ಅಪ್ಸಭಾನು, ಲತಾಲಕ್ಷಿ, ಸ್ತ್ರೀ ಶಕ್ತಿ ಕೇಂದ್ರದ ಪದಾಧಿಕಾರಿಗಳು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದು ಸಹಕರಿಸಿದರು.

ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಳಿಯ ಗ್ರಾಮದ ಆಶಾ ಕಾರ್ಯಕರ್ತೆ ಸುಭಾಷಿಣಿ ಜನಾರ್ದನ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.