ಮುಂಡಾಜೆ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ 67ನೇ ಸಹಕಾರ ಸಪ್ತಾಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆಗೆ ಸಹಕಾರ ಸಂಘಗಳ ಕೊಡುಗೆ ಅನನ್ಯ: ಎನ್.ಎಸ್.ಗೋಖಲೆ

ಹಿಂದೆ ಜುಲಾಯಿ ತಿಂಗಳ ಪ್ರಥಮ ಶನಿವಾರವನ್ನು ಸಹಕಾರಿ ದಿನವನ್ನಾಗಿ ಆಚರಿಸಲಾಗುತ್ತಿತ್ತು, 67 ವರ್ಷಗಳಿಂದೀಚೆ ನವಂಬರ್ ತಿಂಗಳಲ್ಲಿ ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತಿದೆ.ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆ ಸ್ಥಿರತೆಗೆ ಸಹಕಾರ ಸಂಘಗಳು ಸಾಕಷ್ಟು ಕೊಡುಗೆಯನ್ನು ನೀಡುತ್ತವೆ ಎಂದು ಹಿರಿಯ ಸಹಕಾರಿ ಎನ್. ಎಸ್. ಗೋಖಲೆ ಹೇಳಿದರು.
ಅವರು ನ.14ರಂದು ಮುಂಡಾಜೆ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ 67ನೇ ಸಹಕಾರ ಸಪ್ತಾಹವನ್ನು ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಕ್ರಿಯಾಶೀಲ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಜತೆ, ಸದಸ್ಯರಿಗೆ ಗುಣಮಟ್ಟದ ಸೇವೆ ನೀಡುವ ಸಹಕಾರ ಸಂಘಗಳು ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸುವುದರೊಂದಿಗೆ ಸಮಾಜದಲ್ಲಿ ಇತರರಿಗೆ ಮಾದರಿಯಾಗುತ್ತವೆ ಎಂದು ಹೇಳಿದರು.
ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ಸಹಕಾರಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಉಷಾ ನಾಯಕ್ ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿ ನೀಡಿದರು. ಸಂಘದ ನಿರ್ದೇಶಕಿ ಜ್ಯೋತಿ ಜೆ.ಫಡ್ಕೆ ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯ ಸಂಪಿಗೆ ವಿಠಲ್ ರಾವ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪುತ್ತೂರಿನ ಸಾಯ ಎಂಟರ್ಪ್ರೈಸಸ್ ನವರಿಂದ ಅಡಿಕೆ ಮರ ಏರುವ ಯಂತ್ರ, ಅಡಿಕೆ ಸುಲಿಯುವ ಯಂತ್ರ ಹಾಗೂ ಇತರ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಯಿತು.
ಸಂಘದ ಸಿಇಒ ನಾರಾಯಣ ಫಡ್ಕೆ ಸ್ವಾಗತಿಸಿದರು. ಶಾಖಾ ಮ್ಯಾನೇಜರ್ ಗಳಾದ ಕರುಣಾಕರ ಎಂಎಸ್ ಹಾಗೂ ಚಂದ್ರಕಾಂತ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್ ವಂದಿಸಿದರು.
ಸಹಕಾರ ಸಂಘದ ವ್ಯಾಪ್ತಿಯ ಪಂಚಾಯಿತಿಗಳು,ಇತರ ಸಹಕಾರ ಸಂಘಗಳು, ರೈತ ಸೇವಾ ಕೂಟಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದವು.
ಸಹಕಾರಿ ಸಪ್ತಾಹದ ಅಂಗವಾಗಿ ಸಂಘದ ವತಿಯಿಂದ ನಿಡಿಗಲ್, ಕಕ್ಕಿಂಜೆ ಮೊದಲಾದ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.