ಪಡಂಗಡಿಯಲ್ಲಿ ಚಾಮುಂಡೇಶ್ವರಿ ಜನರಲ್ ಸ್ಟೋರ್ & ಕ್ಯಾಂಟೀನ್ ಉದ್ಘಾಟನೆ

ಪಡಂಗಡಿ: ಇಲ್ಲಿಯ ಪ್ರಾಥಮಿಕ ಶಾಲಾ ಬಳಿ ಚಾಮುಂಡೇಶ್ವರಿ ಜನರಲ್ ಸ್ಟೋರ್ & ಕ್ಯಾಂಟೀನ್ ನ.14 ರಂದು ಶುಭಾರಂಭಗೊಂಡಿತು.

ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಗರ್ಡಾಡಿ ಸಂತ ಸೆಬಾಸ್ಟಿಯನ್ ಚರ್ಚ್ ನ ಧರ್ಮಗುರು ಫಾ| ಮಾರ್ಕ್ ಸಲ್ದಾನ, ಕನ್ಯಾಡಿ ಕಟ್ಟೆ ಜುಮ್ಮಾ ಮಸೀದಿಯ ಖತೀಬ ಬಹು ಸಂಶುದ್ದೀನ್ ದಾರಿಮಿ ಉದ್ಘಾಟಿಸಿ ಶುಭ ಹಾರೈಸಿದರು.

ಪಡಂಗಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಮುಖ್ಯ ಅತಿಥಿಗಳಾಗಿದ್ದರು. ಗ್ರಾಹಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

 ಮಾಲಕ ಸಂದೀಪ್ ಶೆಟ್ಟಿ ಪಾಲ್ತ್ಯಾರು , ಮಹಾಬಲ ಶೆಟ್ಟಿ , ಸಂಜೀವ ಶೆಟ್ಟಿ, ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.