HomePage_Banner_
HomePage_Banner_

ಅಳದಂಗಡಿ ಬಿಜೆಪಿ ಬೂತ್ ಸಮಿತಿ ಸಂಚಾಲಕರ ಸಮಾವೇಶ

ಅಳದಂಗಡಿ: ಅಳದಂಗಡಿ ಮಹಾಶಕ್ತಿ ಕೇಂದ್ರದ ಹಿಂದುಳಿದ ವರ್ಗಗಳ ಮೋರ್ಚಾದ ಬೂತ್ ಸಮಿತಿಯ ಸಂಚಾಲಕ-ಸಹಸಂಚಾಲಕರ ಸಮಾವೇಶ ನ.12ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರ ದೇವಾಸ್ಥನದಲ್ಲಿ ನಡೆಯಿತು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬ್ಯೆಲು ಸಮಾವೇಶವನ್ನು ಉದ್ಘಾಟಿಸಿದರು. ಹಿಂದುಳಿದ ವರ್ಗಗಳ ಮೋರ್ಚಾದ ತಾಲೂಕು ಅಧ್ಯಕ್ಷ ಪ್ರಭಾಕರ ಆಚಾರ್ಯ, ಬೆಳ್ತಂಗಡಿ ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ ಬೆಳಾಲು, ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ವಿಶ್ವನಾಥ್ ಹೊಳ್ಳ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಣೇಶ್, ಉಪಾಧ್ಯಕ್ಷ ದಿನಕರ್ ಕುಲಾಲ್, ಕಾರ್ಯದರ್ಶಿ ಅಶ್ವಿತ್ ಓಡೀಲು, ಕಾರ್ಯಕಾರಿ ಸದಸ್ಯರಾದ ಮಂಜುನಾಥ ಆಚಾರ್ಯ, ಗಣೇಶ್ ದೇವಾಡಿಗ, ಬೂತ್ ಸಮಿತಿಯ ಸಂಚಾಲಕ ಸಹಸಂಚಾಲಕರು ಉಪಸ್ಥಿತರಿದ್ದರು.
ಭಾರ್ಗವಿ ಅಠವಳೆ ವಂದೇ ಮಾತರಂ ಹಾಡಿದರು. ದಿನಕರ್ ಕುಲಾಲ್ ಸ್ವಾಗತಿಸಿ ಪ್ರಾಸ್ತಾವಿದರು. ಅರುಣ್ ಕುಮಾರ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.