HomePage_Banner_
HomePage_Banner_

ಪ್ರತ್ಯೇಕ ಮರಳು ನೀತಿ ಶೀಘ್ರ ಅನುಷ್ಠಾನಕ್ಕೆ ದ.ಕ. ಜಿಲ್ಲಾ ಬಿಜೆಪಿ ಶಾಸಕರು ಹಾಗೂ ಸಚಿವರಿಂದ ಸಿಎಂ ಗೆ ಮನವಿ

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮರಳು ನೀತಿ ಶೀಘ್ರ ಅನುಷ್ಠಾನ ಮಾಡುವಂತೆ ದ.ಕ. ಜಿಲ್ಲಾ ಬಿಜೆಪಿ ಶಾಸಕರು ಹಾಗೂ ಸಚಿವರಿಂದ ಮುಖ್ಯ ಮಂತ್ರಿ ಯಡಿಯೂರಪ್ಪ ರಿಗೆ ನ.12 ರಂದು ಮನವಿ ಸಲ್ಲಿಸಲಾಯಿತು.
ಸಿಆರ್‌ಜೆಡ್ ವ್ಯಾಪ್ತಿಯಲ್ಲಿ 2011 ರ ನಂತರ ಸಾಂಪ್ರದಾಯಿಕ ಮರಳು ತೆಗೆಯಲು, ನಾನ್ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಈಗಾಗಲೇ ರಾಜ್ಯ ಮಿನರಲ್ ನಿಗಮಕ್ಕೆ ಸಲ್ಲಿಸಿರುವ ೩೦ ಪ್ರಸ್ತಾವನೆಯನ್ನು ಕೂಡಲೆ ಟೆಂಡರ್ ಕರೆದು ಅನುಮತಿ ನೀಡುವುದು, ದ.ಕ ಜಿಲ್ಲೆಯ ತುಂಬೆ, ಮೊಳವೂರು ವೆಂಟೆಂಡ್ ಡ್ಯಾಂ ಸಹಿತ ಇತರೆ ಕಡೆಗಳಲ್ಲಿ ಮರಳು ಶೇಖರಣೆ ತೆರವುಗೊಳಿಸಲು ಡಿಸಿಗೆ ಸಂಪೂರ್ಣ ಅಧಿಕಾರ ನೀಡುವುದು ಹಾಗೂ ದ.ಕ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮರಳು ನೀತಿ ಶೀಘ್ರ ಅನುಷ್ಠಾನ ಮಾಡುವರೇ ಗಣಿ ಇಲಾಖೆಗೆ ನಿರ್ದೇಶನ ನೀಡುವಂತೆ ಸಿ ಎಂ ಯಡಿಯೂರಪ್ಪ ರವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಂಗಳೂರು ವೇದವ್ಯಾಸ ಕಾಮತ್, ಸುಳ್ಯ ಶಾಸಕ ಅಂಗಾರ, ಪುತ್ತೂರು ಸಂಜೀವ ಮಠಂದೂರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.